ADVERTISEMENT

ವಚನಾಮೃತ: ಮಾತೆಂಬುದು ಜ್ಯೋತಿರ್ಲಿಂಗ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 15:47 IST
Last Updated 27 ನವೆಂಬರ್ 2020, 15:47 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ನಾವು ಆಡುವ ಮಾತಿಗೆ ಬಹಳ ಮಹತ್ವವಿದೆ. ಮಾತನಾಡುವಾಗ ಮೈತುಂಬ ಕಣ್ಣಾಗಿಸಿಕೊಂಡು ಮಾತನಾಡಬೇಕು. ನಮ್ಮ ಮಾತಿನಲ್ಲಿ ಶ್ರದ್ಧೆ ವಿಶ್ವಾಸ ಇದ್ದಾಗ ಮಹತ್ವ ಬರುತ್ತದೆ.

ವಿದ್ಯಾವಂತರಲ್ಲಿ ವಿನಯ ಇರಲೇಬೇಕು. ವಿನಯ ಇದ್ದಾಗ ಓದಿದ ಓದಿಗೂ ಬೆಲೆ ಇರುತ್ತದೆ ಮತ್ತು ವ್ಯಕ್ತಿಗೆ ಗೌರವ ಬರುತ್ತದೆ.

ವಿನಯ ಅಂದರೆ ನಮಗಿಂತ ಜ್ಞಾನಿಗಳು ಕಂಡಾಗ ಅವರ ಬಗ್ಗೆ, ಅವರಾಡುವ ಮಾತಿನ ಬಗ್ಗೆ ಗೌರವ ಮತ್ತು ಅದನ್ನು ಕೂಲಂಕಷವಾಗಿ ಸಮಾಧಾನದಿಂದ ವಿಚಾರಮಾಡುವ ವ್ಯವಧಾನ ಇರಬೇಕು ಅನ್ನುವುದು ಶರಣರ ನಿಲುವಾಗಿದೆ.

ADVERTISEMENT

ಇನ್ನೊಂದು ಮಹತ್ವದ ಮಾತನ್ನು ಹೇಳಿದ್ದಾರೆ. ಅದುವೇ ಆಸೆ. ಯಾವ ವ್ಯಕ್ತಿಯಲ್ಲಿ ಆಸೆ ಅಂಕುರಿಸುವುದೊ ಅಲ್ಲಿ ಅದು ದುರಾಸೆ ಇರಬಾರದು. ಸದಾಸೆ ಇದ್ದಾಗ ಅಭಿವೃದ್ಧಿ ನಿಶ್ಚಿತ.

ನೂರನೋದಿ ನೂರ ಕೇಳಿದರೇನು?

ಅಸೆ ಹರಿಯದು ರೋಷ ಬಿಡದು.

ಮಜ್ಜನಕ್ಕೇರದು ಫಲವೇನು?

ಮನವಿಲ್ಲದ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲ ಸಂಗಮ ದೇವಾ

ಈ ವಚನದಲ್ಲಿ ಬಸವಣ್ಣನವರು ಹೇಳಿದ ಮಾತು ಮಜ್ಜನಕ್ಕೆರೆದು ಫಲವೇನು? ಏನು ಮಾಡಿದರೆ ಏನು ಫಲ? ನಮ್ಮ ಭಾವ ಶುದ್ದವಾಗಿರದಿದ್ದರೆ ಪ್ರಯೋಜನವೇನು? ಕಲ್ಲ ಮೇಲೆ ಬೇಕಾದಷ್ಟು ನೀರು ಹಾಕಿದರೂ ಅದು ಮೃದುವಾಗುವುದಿಲ್ಲ ಎನ್ನುವ ಅರ್ಥ ಇದೆ. ಭಗವಂತನ ಬಗ್ಗೆ ಶ್ರದ್ಧೆ ಭಕ್ತಿ ಇಲ್ಲದೆ ಸುಮ್ಮನೆ ತೋರಿಕೆಗೆ ಅಭಿಷೇಕ ಮಾಡಿದಂತಾಗುತ್ತದೆ. ನಡೆ ನುಡಿ ಎರಡು ಒಂದಾಗಬೇಕು. ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಂತಾದರೆ ಅದಕ್ಕೆ ಗೌರವ ಬರುವುದಿಲ್ಲ.

ಇನ್ನೊಂದು ಮಾತು ಶರಣರು ಹೇಳಿದ್ದಾರೆ. ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವಯ್ಯ ನಂತೊಲಿವನಯ್ಯ..’ ಅಂದರೆ ಏನು ಮಾತನಾಡುತ್ತೇವೆಯೋ ಅದರಂತೆ ನಡೆಯದಿದ್ದರೆ ಭಗವಂತ ಹಾಗೂ ಸಮಾಜ ನಂಬುದಿಲ್ಲ. ಜ್ಞಾನಿಯಾದವನು ಆಸೆ, ರೋಷ, ದ್ವೇಷ ಇವೆಲ್ಲವನ್ನೂ ತ್ಯಜಿಸಬೇಕು. ನುಡಿದಂತೆ ನಡೆ.. ಇದೇ ಜನ್ಮ ಕಡೆ ಅಲ್ಲವೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.