ADVERTISEMENT

ಅಂಬೇಡ್ಕರ್ ಸಿದ್ಧಾಂತ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 1 ಮೇ 2012, 10:25 IST
Last Updated 1 ಮೇ 2012, 10:25 IST

ಹಲಗೂರು: ಅಂಬೇಡ್ಕರ್ ಜಯುಂತಿಯನ್ನು ಹಬ್ಬಗಳ ರೀತಿ ಆಚರಿಸಲಾಗುತ್ತಿದೆ. ಇದೇ ಮುಂದೆ ಮೌಢ್ಯದ ಆಚರಣೆಯಂತಾಗುವ ಅಪಾಯ ಹೆಚ್ಚಿದೆ. ಆದ್ದರಿಂದ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಚಿನ್ನಸ್ವಾಮಿ ಹೇಳೀದರು.

ಹಲಗೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಗಗನಚುಕ್ಕಿ ಸಾಂಸ್ಕೃತಿಕ ಕಲಾ ವೃಂದ ಮತ್ತು ತರು ಟ್ರಸ್ಟ್ ವತಿಯಿಂದ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಗಾಂಧಿಯ ಹಲವು ವಿಚಾರಗಳನ್ನು ಅಂಬೇಡ್ಕರ್ ವಿರೋಧಿಸುತ್ತಿದ್ದರು. ಇದನ್ನು ಬಿಟ್ಟು ಉಳಿದ ವಿಚಾರಗಳಲ್ಲಿ ಇಬ್ಬರು ಮಹನೀಯರಲ್ಲಿ ಒಮ್ಮತಾಭಿ ಪ್ರಾಯವಿತ್ತು. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಮಹಿಳೆ ಯರು ಮತ್ತು ತುಳಿತಕ್ಕೆ ಒಳಗಾದ ಜನರ ಏಳಿಗೆಯೇ ಅಂಬೇಡ್ಕರ್ ಕನಸು. ಅದೇ ಅವರ ಸಂವಿಧಾನದಲ್ಲೂ ಮೂಢಿ ಬಂದಿದೆ. ಆದರೂ ಇಂದಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ಕಾಣದೆ ಸಮಾಜದಲ್ಲಿ ಏಳು ಬೀಳು ಕಾಣುತ್ತಿವೆ. ಇಂತಹ ಕೆಲವು ದ್ವಂದ್ವ ಇರುವುದು ವಾಸ್ತವದ ಲೋಪಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ವಿಶೇಷ ಅಗತ್ಯವುಳ್ಳ ಅಂಗವಿಕಲ ಮಕ್ಕಳ ಸಂಪನ್ಮೂಲ ವ್ಯಕ್ತಿ ಲಿಂಗಪೊಟ್ಟಣ ಸುಂದ್ರಪ್ಪ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಲಾಯಿತು. ಕಾವ್ಯಶ್ರೀ ಪ್ರಶಸ್ತಿ ಪುರಸ್ಕೃತ ಉಮೇಶ್ ದಡಮಹಳ್ಳಿ ಅವರನ್ನು ಅಭಿನಂದಿಸಲಾಯಿತು. ಕಲಾ ವೃಂದದ ಕಲಾವಿ ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ಪ್ರಾಂಶುಪಾಲರಾದ ಪ್ರೊ.ಬಿ.ಶ್ರೀಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಅಧ್ಯಕ್ಷ ಎಚ್.ವಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿನಾರಾಯಣ, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನಾಗೇಶ್, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮುಟ್ಟನಹಳ್ಳಿ ವೆಂಕಟೇಶ್, ಕಾರ್ಯಾಧ್ಯಕ್ಷ ಹಲಗೂರು ಶ್ರೀನಿವಾಸ್, ಟ್ರಸ್ಟ್‌ನ ಜಿ.ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.