ADVERTISEMENT

ಅಖಾಡದಲ್ಲಿ 47 ಮಂದಿ

ಉಮೇದುವಾರಿಕೆ ವಾಪಸ್ ಪಡೆದವರು 6

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 6:33 IST
Last Updated 21 ಏಪ್ರಿಲ್ 2013, 6:33 IST

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಶನಿವಾರ 6 ಮಂದಿ ಅಭ್ಯರ್ಥಿಗಳು ಉಮೇದುವಾರಿಕೆ ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ ಒಟ್ಟು 47 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 53 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಆರು ಮಂದಿ ವಾಪಸ್ ಪಡೆದಿದ್ದಾರೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ
12 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಎಂ. ನಾಗರತ್ನಾ(ಪಕ್ಷೇತರ) ಹಾಗೂ ಆರ್. ಶ್ರೀಧರಮೂರ್ತಿ (ಬಿಎಸ್‌ಆರ್ ಕಾಂಗ್ರೆಸ್) ಉಮೇದುವಾರಿಕೆ ಹಿಂಪಡೆದಿದ್ದಾರೆ.

ಅಂತಿಮವಾಗಿ 10 ಮಂದಿ ಕಣದಲ್ಲಿ ಉಳಿದಿದ್ದಾರೆ. ಚಾಮರಾಜು (ಜೆಡಿಎಸ್), ಎಸ್. ಜಯಣ್ಣ (ಕಾಂಗ್ರೆಸ್), ಜಿ.ಎನ್. ನಂಜುಂಡಸ್ವಾಮಿ (ಬಿಜೆಪಿ), ಎನ್. ಮಹೇಶ್ (ಬಿಎಸ್‌ಪಿ), ಎಂ. ನಂಜಯ್ಯ (ಜೆಡಿಯು), ಜಿ. ನಿಂಗರಾಜ್ (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ), ಎಸ್. ಬಾಲರಾಜು (ಕೆಜೆಪಿ), ಎಲ್. ಚಂದ್ರಶೇಖರ್ (ಪಕ್ಷೇತರ), ಪಿ. ಬಾಲರಾಜು (ಪಕ್ಷೇತರ), ಸುರೇಶ್‌ಕುಮಾರ್ (ಪಕ್ಷೇತರ) ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ
12 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಪಾಪಣ್ಣಶೆಟ್ಟಿ (ಪಕ್ಷೇತರ), ಜಿ.ಜಿ. ಮಲ್ಲಿಕಾರ್ಜುನಪ್ಪ (ಪಕ್ಷೇತರ) ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ 10 ಮಂದಿ ಇದ್ದಾರೆ. ನಾಗೇಂದ್ರ (ಬಿಎಸ್‌ಪಿ), ಎಚ್.ಜಿ. ಮಲ್ಲಿಕಾರ್ಜುನಸ್ವಾಮಿ (ಬಿಜೆಪಿ),                            ಎಚ್.ಎಸ್. ಮಹದೇವಪ್ರಸಾದ್ (ಕಾಂಗ್ರೆಸ್), ಬಿ.ಪಿ. ಮುದ್ದುಮಲ್ಲು (ಜೆಡಿಎಸ್), ಜಿ.ಎಂ. ಗಾಡ್ಕರ್ (ಸಮಾಜವಾದಿ ಜನತಾ ಪಾರ್ಟಿ- ಕರ್ನಾಟಕ), ಸಿ.ಎಸ್. ನಿರಂಜನ್‌ಕುಮಾರ್ (ಕೆಜೆಪಿ), ಪಿ. ಸಂಘಸೇನಾ (ಆರ್‌ಪಿಐ), ಸುರೇಶ (ಬಿಎಸ್‌ಆರ್ ಕಾಂಗ್ರೆಸ್), ಮರಿಸಿದ್ದಯ್ಯ (ಪಕ್ಷೇತರ), ಸುಭಾಷ್ (ಪಕ್ಷೇತರ) ಕಣದಲ್ಲಿ ಉಳಿದಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರ
15 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ದುಂಡೇಗೌಡ (ಪಕ್ಷೇತರ) ಉಮೇದುವಾರಿಕೆ ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ 14 ಮಂದಿ ಚುನಾವಣಾ ಅಖಾಡದಲ್ಲಿ ಉಳಿದಿದ್ದಾರೆ.

ಆರ್.ಪಿ. ನಂಜುಂಡಸ್ವಾಮಿ (ಬಿಎಸ್‌ಪಿ), ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್), ಎಸ್. ಪಿ. ಸಣ್ಣಮಾದಶೆಟ್ಟಿ (ಜೆಡಿಎಸ್), ಎಸ್. ಸೋಮನಾಯಕ(ಬಿಜೆಪಿ), ಡಿ.ಎಸ್. ದೊರೆಸ್ವಾಮಿ (ಸಮಾಜವಾದಿ ಪಾರ್ಟಿ), ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ (ಕೆಜೆಪಿ), ಎಂ.ಸಿ. ರಾಜಣ್ಣ (ಸಿಪಿಐ-ಎಂಎಲ್), ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ), ಕೆ. ವೀರಭದ್ರಸ್ವಾಮಿ (ಕರ್ನಾಟಕ ಮಕ್ಕಳ ಪಕ್ಷ), ಕೆ. ಕರುಣಾಕರ(ಪಕ್ಷೇತರ), ಪುಟ್ಟರಾಜು (ಪಕ್ಷೇತರ), ಮಹದೇವಸ್ವಾಮಿ (ಪಕ್ಷೇತರ), ಮಹಮ್ಮದ್ ಇನಾಯತ್ ಉಲ್ಲಾ (ಪಕ್ಷೇತರ), ರಾಜು (ಪಕ್ಷೇತರ).

ಹನೂರು ವಿಧಾನಸಭಾ ಕ್ಷೇತ್ರ
14 ಅಭ್ಯರ್ಥಿಗಳು ಕ್ರಮಬದ್ಧವಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಈ ಪೈಕಿ ಟಿ. ಮುತ್ತುರಾಜ್ (ಪಕ್ಷೇತರ) ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಅಂತಿಮವಾಗಿ 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ.

ಆರ್. ನರೇಂದ್ರ (ಕಾಂಗ್ರೆಸ್), ಪರಿಮಳಾ ನಾಗಪ್ಪ (ಜೆಡಿಎಸ್), ಎಸ್. ಪುಟ್ಟರಾಜು (ಬಿಎಸ್‌ಪಿ), ಬಿ.ಕೆ. ಶಿವಕುಮಾರ್ (ಬಿಜೆಪಿ), ಎಸ್. ಗಂಗಾಧರ (ಜೆಡಿಯು), ಪೊನ್ನಾಚಿ ಮಹದೇವಸ್ವಾಮಿ (ಕೆಜೆಪಿ), ಬೀರೇಶ್ (ಬಿಎಸ್‌ಆರ್ ಕಾಂಗ್ರೆಸ್), ಎಂ. ರವಿ (ಎಐಎಡಿಎಂಕೆ), ಎಸ್. ದತ್ತೇಶ್‌ಕುಮಾರ್ (ಪಕ್ಷೇತರ), ಕೆ. ನಾಗರಾಜು (ಪಕ್ಷೇತರ), ಎಂ. ಪ್ರದೀಪ್‌ಕುಮಾರ್ (ಪಕ್ಷೇತರ), ಸಿ.ಎಂ. ಮಹದೇವಸ್ವಾಮಿ (ಪಕ್ಷೇತರ), ಆರ್. ಸಿದ್ದಪ್ಪ (ಪಕ್ಷೇತರ) ಕಣದಲ್ಲಿ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT