ಆಲಮಟ್ಟಿ (ವಿಜಾಪುರ ಜಿಲ್ಲೆ): ಆಲಮಟ್ಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಆಲಿಕಲ್ಲಿನಿಂದ ಕೂಡಿದ ಭಾರಿ ಮಳೆಯಾಗಿದೆ. ಹೆಬ್ಬಾಳ, ಅಬ್ಬಿಹಾಳ ಗ್ರಾಮಗಳಲ್ಲಿ ಉಳ್ಳಾಗಡ್ಡಿ ಬೆಳೆ ಹಾನಿಗೊಳಗಾಗಿದೆ.
ಆಲಿಕಲ್ಲಿನ ಹೊಡೆತಕ್ಕೆ ಉಳ್ಳಾಗಡ್ಡಿ ಎಲ್ಲ ಸಸಿಗಳು ತುಂಡಾಗಿ ಕತ್ತರಿಸಿ ಬಿದ್ದಿವೆ. ಇದರಿಂದಾಗಿ ಸಸಿಗಳು ಸಮರ್ಪಕವಾಗಿ ಬೆಳೆಯದೆ ಉಳ್ಳಾಗಡ್ಡಿ ಕೊಳೆಯುತ್ತವೆ ಎಂದು ಅಲ್ಲಿನ ರೈತರು ತಿಳಿಸಿದ್ದಾರೆ.
ರೈತರು ಹಿಂಗಾರು ಬೆಳೆಯಾಗಿ ಹೆಬ್ಬಾಳ ಭಾಗದಲ್ಲಿ ವ್ಯಾಪಕವಾಗಿ ಬೆಳೆದಿದ್ದ ಉಳ್ಳಾಗಡ್ಡಿ ಇನ್ನು ಕೆಲ ದಿನಗಳಲ್ಲಿ ಕಟಾವಿಗೆ ಬರುತ್ತಿತ್ತು. ಆದರೆ ಈ ಮಳೆ ಹೊಡೆತ ನೀಡಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.