ADVERTISEMENT

ಇತಿಹಾಸದ ತಿಳಿವಳಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಲಿಂಗಸುಗೂರ: ಭೂತಕಾಲದಲ್ಲಿ ನಡೆದಿರುವ ಘಟನಾವಳಿಗಳನ್ನು ಇತಿಹಾಸ ಎಂದು ಹೇಳಿಕೊಳ್ಳುತ್ತೇವೆ. ಅಂತಹ ಇತಿಹಾಸ ವರ್ತಮಾನದ ಬದುಕಿಗೆ ದಾರಿದೀಪವಾಗಿ, ಭವಿಷತ್ ಕಾಲದ ಬದುಕಿಗೆ ಮಾರ್ಗಸೂಚಿಯಾಗಿ ನಿಲ್ಲುವುದೆ ಇತಿಹಾಸ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಇತಿಹಾಸದ ಕನಿಷ್ಠ ಮಟ್ಟದ ತಿಳಿವಳಿಕೆ ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಹೇಳಿದರು.ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಇತಿಹಾಸ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇತಿಹಾಸ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಅತ್ಯುನ್ನತ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳಲ್ಲಿ ಇತಿಹಾಸದ ವಿಷಯ ಪ್ರಮುಖ ಪಾತ್ರ ವಹಿಸುತ್ತದೆ.ಯಾವುದೆ ವಿಷಯದಲ್ಲಿ ಪದವಿ ಪಾಂಡಿತ್ಯ ಪಡೆದಿದ್ದರೂ ಇತಿಹಾಸ ವಿಷಯದ ಸಾಮಾನ್ಯ ಜ್ಞಾನ ಹೊಂದಿರಲೇಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಚೌರ್ ವಹಿಸಿದ್ದರು. ತಹಸೀಲ್ದಾರ ಎಂ.ರಾಚಪ್ಪ,  ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರು, ಪ್ರಾಚಾರ್ಯ ಟಿ.ಎಂ. ರಾಜಾಸಾಬ, ಜಿ. ಬಸವರಾಜ, ಇತಿಹಾಸ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ನರಸಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಐಲಿ ಮತ್ತಿತರರು ಉಪಸ್ಥಿತರಿದ್ದರು.


.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT