ADVERTISEMENT

ಎನ್‌ಸಿಸಿ ತರಬೇತಿ ಕಡ್ಡಾಯ ಇಲ್ಲ: ರಾಜೀವ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ವಿಜಾಪುರ: `ಶಾಲಾ-ಕಾಲೇಜುಗಳಲ್ಲಿ ಎನ್.ಸಿ.ಸಿ. ಕಡ್ಡಾಯಗೊಳಿಸುವ ಪ್ರಸ್ತಾವ ಇಲ್ಲ. ಎನ್‌ಸಿಸಿ ಕೆಡೆಟ್‌ಗಳಿಗೆ ಸಲಕರಣೆ ಪೂರೈಸುವಲ್ಲಿ ಉಂಟಾಗಿರುವ ಸಮಸ್ಯೆ ಇನ್ನೆರಡು ತಿಂಗಳಲ್ಲಿ ಪರಿಹಾರವಾಗಲಿದೆ~ ಎಂದು ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ, ಏರ್ ಕಮಾಡೋರ್ ಸಿ. ರಾಜೀವ್ ಹೇಳಿದರು.

ದೆಹಲಿಯಲ್ಲಿ ನಡೆದ ಎನ್.ಸಿ.ಸಿ.ಯ ರಾಷ್ಟ್ರ ಮಟ್ಟದ `ಥಲ್ ಸೈನಿಕ ಕ್ಯಾಂಪ್~ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡ ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದ ಕೆಡೆಟ್‌ಗಳಿಗೆ  ಎನ್.ಸಿ.ಸಿ. ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

ಥಲ್ ಕ್ಯಾಂಪ್‌ನಲ್ಲಿ ಸಾಧನೆ ಮಾಡಿರುವ ಕೆಡೆಟ್‌ಗಳಿಗೆ ರಾಜ್ಯ ಸರ್ಕಾರ ನಗದು ಬಹುಮಾನ ನೀಡಲಿದೆ ಎಂದರು.
ಎನ್‌ಸಿಸಿ ಅಧಿಕಾರಿಗಳಾದ ಕರ್ನಲ್ ಅಶೋಕ ಇಂಗಳೇಶ್ವರ, ಯು.ಎಸ್. ಸಿಂಗ್, ಎಸ್.ಎಲ್. ಕುಂಬಾರ, ಡಿ.ಗಿರೀಶ್, ಡಾ.ನೀಡಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.