ADVERTISEMENT

ಒಬ್ಬ ಪರೀಕ್ಷಾರ್ಥಿಗೆ 11 ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST
ಒಬ್ಬ ಪರೀಕ್ಷಾರ್ಥಿಗೆ 11 ಸಿಬ್ಬಂದಿ!
ಒಬ್ಬ ಪರೀಕ್ಷಾರ್ಥಿಗೆ 11 ಸಿಬ್ಬಂದಿ!   

ಆಲಮೇಲ (ವಿಜಾಪುರ ಜಿಲ್ಲೆ): ಮಂಗಳವಾರ ಪಿಯುಸಿ ದ್ವಿತೀಯ ವರ್ಷದ ಭೂಗೋಳಶಾಸ್ತ್ರ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದರೆ, ಅವಳಿಗಾಗಿ 11 ಜನ ಸಿಬ್ಬಂದಿ ಕರ್ತವ್ಯ ನಿಭಾಯಿಸುತ್ತಿದ್ದರು!
ಈ ಘಟನೆ ನಡೆದಿದ್ದು ಇಲ್ಲಿಗೆ ಸಮೀಪದ ಕಡಣಿ ಗ್ರಾಮದ ಶ್ರೀ ಪರಮಾನಂದ ಭೋಗಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ.

ದೇವಣಗಾಂವದ ಪ್ರಗತಿ ಶಿಕ್ಷಣ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳು ಭೂಗೋಳಶಾಸ್ತ್ರ ವಿಷಯ ತೆಗೆದುಕೊಂಡಿದ್ದರಿಂದ ಪರೀಕ್ಷೆ ಬರೆಯುತ್ತಿದ್ದಳು. ಒಬ್ಬ ಕೊಠಡಿ ಮೇಲ್ವಿಚಾರಕ, 3 ಜನ  ಸ್ಕ್ವಾಡ್, ಒಬ್ಬ ಮಹಿಳಾ ಪರಿಶೀಲಕಿ, ಒಬ್ಬ ಉತ್ತರಪತ್ರಿಕೆ ಪಾಲಕ, ಒಬ್ಬ ಪ್ರಶ್ನೆಪತ್ರಿಕೆ ಪಾಲಕ, ಕೇಂದ್ರದ ಮುಖ್ಯಸ್ಥ, ಜಂಟಿ ಪರೀಕ್ಷಾಧಿಕಾರಿ, ಕಾರ್ಯಾಲಯದ ಗುಮಾಸ್ತ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 11 ಜನ ಸಿಬ್ಬಂದಿ ಪರೀಕ್ಷೆ ಕೇಂದ್ರದಲ್ಲಿ ಕರ್ತವ್ಯ ನಿಭಾಯಿಸುತ್ತ್ದ್ದಿದುದು ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.