ADVERTISEMENT

ಕಡೆಂಗೋಡ್ಲು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಎಂಜಿಎಂ ಕಾಲೇಜಿನ ಆಶ್ರಯದಲ್ಲಿ ನೀಡಲಾಗುವ 2011ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಕವಿ ಚಿದಾನಂದ ಸಾಲಿ ಅವರಿಗೆ    ಶನಿವಾರ ಪ್ರದಾನ ಮಾಡಲಾಯಿತು.

ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಂ ಪ್ರಶಸ್ತಿ ಪ್ರದಾನ ಮಾಡಿದರು.

ಅತಿಥಿಯಾಗಿದ್ದ ಸಾಹಿತಿ ಪ್ರೊ. ಎ.ವಿ.ನಾವಡ ಮಾತನಾಡಿ, `ಕಡೆಂಗೋಡ್ಲು ಶಂಕರ ಭಟ್ ಅವರ ಕವನಗಳನ್ನು ಮರು ಓದಿಗೆ ಬಳಸಿಕೊಳ್ಳಬೇಕು. ಪತ್ರಿಕೋದ್ಯಮಿಯಾಗಿದ್ದ ಅವರ 40 ವರ್ಷಗಳ ಸಮಗ್ರ ಸಂಪಾದಕೀಯವನ್ನು ಆಕರ ಗ್ರಂಥವಾಗಿ ಪ್ರಕಟಿಸಬೇಕು. ಇದು ಕನ್ನಡಕ್ಕೆ ನೀಡುವ ಬಹು ದೊಡ್ಡ ಕೊಡುಗೆಯಾಗುತ್ತದೆ~ ಎಂದರು.
 
ಚಿದಾನಂದ ಸಾಲಿ ಅವರ ಪ್ರಶಸ್ತಿ ಪುರಸ್ಕತ ಕೃತಿ `ರೆ~  ಕವನ ಸಂಕಲನ ಬಿಡುಗಡೆ ಮಾಡಲಾಯಿತು.ಪ್ರಶಸ್ತಿಯ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ 1979ರಿಂದ ಪ್ರಶಸ್ತಿ ಪುರಸ್ಕತರು ಹಾಗೂ ತೀರ್ಪುಗಾರರನ್ನು ಅಭಿನಂದಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.