ADVERTISEMENT

ಕಾಲುವೆಯಲ್ಲಿ ವಿಗ್ರಹ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 19:30 IST
Last Updated 9 ನವೆಂಬರ್ 2012, 19:30 IST
ಕಾಲುವೆಯಲ್ಲಿ ವಿಗ್ರಹ ಪತ್ತೆ
ಕಾಲುವೆಯಲ್ಲಿ ವಿಗ್ರಹ ಪತ್ತೆ   

ಹೊಸಪೇಟೆ: ಮಹಾವೀರ  ಮತ್ತು ತೀರ್ಥಂಕರರ ಉಬ್ಬು ಚಿತ್ರಗಳಿರುವ ಒಟ್ಟು ಮೂರು ತಾಮ್ರದ ವಿಗ್ರಹಗಳು ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಕಾಲುವೆಯಲ್ಲಿ ಶುಕ್ರವಾರ  ಮಧ್ಯಾಹ್ನ ಪತ್ತೆಯಾಗಿವೆ.

ಬುಕ್ಕಸಾಗರ ಗ್ರಾಮದ ವೀರಣ್ಣ ಕ್ಯಾಂಪ್ ಬಳಿ ಇರುವ ಎಲ್‌ಎಲ್‌ಸಿ ಕಾಲುವೆಯಲ್ಲಿ ನೀರು ಹರಿಯುವುದನ್ನು ಸಂಪೂರ್ಣ ನಿಲ್ಲಿಸಿರುವುದರಿಂದ ತಳದಲ್ಲಿ ಈ ವಿಗ್ರಹಗಳು ಕಾಣಿಸಿಕೊಂಡಿವೆ. ಅಂದಾಜು ತಲಾ 6 ಕೆ.ಜಿ. ತೂಕವಿರುವ ಈ ವಿಗ್ರಹಗಳ ಪೈಕಿ ಒಂದರಲ್ಲಿ ಮಹಾವೀರನು ತಪಸ್ಸಿಗೆ ಕುಳಿತಿರುವುದನ್ನು ಕಾಣಬಹುದಾಗಿದೆ. ಉಳಿದೆರಡರಲ್ಲಿ ತೀರ್ಥಂಕರರ ಚಿತ್ರಗಳಿವೆ.

ಯಾರೋ  ಕಳವು ಮಾಡಿದ ಈ ವಿಗ್ರಹಗಳನ್ನು ಕಾಲುವೆಯಲ್ಲಿ ಬಿಸಾಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಮಲಾಪುರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.