ADVERTISEMENT

ಕಿತ್ತೂರ ಕೋಟೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 19:30 IST
Last Updated 27 ಜುಲೈ 2012, 19:30 IST
ಕಿತ್ತೂರ ಕೋಟೆ ಗೋಡೆ ಕುಸಿತ
ಕಿತ್ತೂರ ಕೋಟೆ ಗೋಡೆ ಕುಸಿತ   

ಚನ್ನಮ್ಮನ ಕಿತ್ತೂರು: ವೀರ ರಾಣಿ ಕಿತ್ತೂರ ಚನ್ನಮ್ಮ ಕೋಟೆಯ ಮುಖ್ಯ ದ್ವಾರದ ಬಳಿ ಸುಮಾರು 10 ಅಡಿ ಅಗಲ ಹಾಗೂ ಸುಮಾರು 11 ಅಡಿ ಉದ್ದದ ಗೋಡೆ ಕುಸಿದ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.

ಗೋಡೆಯ ಮಣ್ಣು ಗುಣಮಟ್ಟ ಕಳೆದುಕೊಳ್ಳುತ್ತ ಸಾಗಿದ್ದು ಕೋಟೆಯ ಹೊರ ವಲಯದ ಗೋಡೆೆಯು ಮೇಲಿಂದ ಮೇಲೆ ಬೀಳುತ್ತಲೇ ಸಾಗಿದೆ. ಗೋಡೆ ಬಿದ್ದ ಸ್ಥಳಕ್ಕೆ ಪ್ರಾಚ್ಯವಸ್ತು ಇಲಾಖೆಯ ಉಪನಿರ್ದೇಶಕ ಸ್ವಾಮಿ ಮತ್ತು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕರಾದ ಸುವರ್ಣಾ ಭೇಟಿ ನೀಡಿ ಪರಿಶೀಲಿಸಿದರು. 

`ಗೋಡೆಯ ಭಾವಚಿತ್ರಗಳನ್ನು ಮೈಸೂರಿನ ಇಲಾಖೆಯ  ನಿರ್ದೇಶಕರಿಗೆ ಕಳುಹಿಸಿದ್ದೇನೆ. ಅವರ ಆದೇಶ ಬಂದ ನಂತರ ಮುಂದಿನ ಕಾರ್ಯ ಕೈಕೊಳ್ಳಲಾಗುವುದು` ಎಂದು ಸ್ವಾಮಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.