ADVERTISEMENT

ಕೃಷಿ ಉತ್ಪಾದನಾ ವೆಚ್ಚ ಕಡಿಮೆಯಾಗಲಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST

 ಮಂಡ್ಯ: ಕೃಷಿ ವಸ್ತುಗಳ ಉತ್ಪಾದನಾ ವೆಚ್ಚ ಕಡಿಮೆ ಮಾಡುವ, ಇಳುವರಿ ಹೆಚ್ಚಿಸುವ ಹಾಗೂ ಉತ್ತಮ ಬೆಲೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಜಯರಾಮ್ ಹೇಳಿದರು.

ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಆಕಾಶವಾಣಿ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ವಿ.ಸಿ. ಫಾರಂನಲ್ಲಿ ಆಯೋಜಿಸಲಾಗಿದ್ದ ಬತ್ತ ಮತ್ತು ಕಬ್ಬು ಉತ್ಪಾದನಾ ಕ್ರಮಗಳ ಬಗ್ಗೆ ರೈತರು ಹಾಗೂ ವಿಜ್ಞಾನಿಗಳ ನಡುವೆ ಸಂವಾದ ಮತ್ತು ಪೈರು ಪಚ್ಚೆ ಬಾನುಲಿ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಲಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಣ್ಣವೀರಪ್ಪನವರ್, ಜಿ.ಕೆ.ವಿ.ಕೆ. ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಶಿವಣ್ಣ, ಆತ್ಮ ಉಪ ಯೋಜನಾ ನಿರ್ದೇಶಕ ಡಾ. ಸಿ.ಶಂಕರಯ್ಯ, ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯದ ಉಪ ಕೃಷಿ ನಿರ್ದೇಶಕ ಜಿ.ಸಿ. ಜಯಸ್ವಾಮಿ, ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಜಿ.ಕೆ.ರವೀಂದ್ರಕುಮಾರ್, ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಕೆ.ಟಿ.ಪಾಂಡುರಂಗೇಗೌಡ, ಆಕಾಶವಾಣಿ ಪ್ರಸಾರ ನಿರ್ವಾಹಕ ಎನ್.ಕೇಶವಮೂರ್ತಿ, ಆತ್ಮ ಯೋಜನಾ ನಿರ್ದೇಶಕ ಎಸ್.ಪುಟ್ಟಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.