ADVERTISEMENT

ಕೆಆರ್‌ಎಸ್ ಜಲಾಶಯ ಭರ್ತಿ ಮುಖ್ಯಮಂತ್ರಿ ಬಾಗಿನ ಇಂದು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 19:30 IST
Last Updated 16 ಆಗಸ್ಟ್ 2011, 19:30 IST
ಕೆಆರ್‌ಎಸ್ ಜಲಾಶಯ ಭರ್ತಿ ಮುಖ್ಯಮಂತ್ರಿ ಬಾಗಿನ ಇಂದು
ಕೆಆರ್‌ಎಸ್ ಜಲಾಶಯ ಭರ್ತಿ ಮುಖ್ಯಮಂತ್ರಿ ಬಾಗಿನ ಇಂದು   

ಶ್ರೀರಂಗಪಟ್ಟಣ: ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಜಲಾಶಯ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಭರ್ತಿಯಾಗಿದೆ.

ಜಲಾಶಯ ತನ್ನ ಗರಿಷ್ಠ ಮಟ್ಟ 124.80 ಅಡಿ ತಲುಪಿದೆ. 41.45 ಟಿಎಂಸಿ ಸಾಮರ್ಥ್ಯದ ಜಲಾಶಯ ತನ್ನ ಉತ್ತುಂಗ ತಲುಪಿದೆ. ಮಂಗಳವಾರ ಸಂಜೆ 15,202 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 8,540 ಕ್ಯೂಸೆಕ್ ಹೊರ ಹರಿವು ಇತ್ತು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 109.39 ಅಡಿ ನೀರು ಸಂಗ್ರಹವಾಗಿತ್ತು. 2,896 ಕ್ಯೂಸೆಕ್ ಒಳ ಹರಿವು ಹಾಗೂ 5,157 ಕ್ಯೂಸೆಕ್ ಹೊರ ಹರಿವು ದಾಖಲಾಗಿತ್ತು.

2010ರಲ್ಲಿ ಅಕ್ಟೋಬರ್ 18ಕ್ಕೆ ಜಲಾಶಯ ತನ್ನ ಗರಿಷ್ಠ ಮಟ್ಟ ತಲುಪಿತ್ತು. ಈ ಬಾರಿ ಎರಡು ತಿಂಗಳು ಮೊದಲೇ ಜಲಾಶಯ ಭರ್ತಿಯಾಗಿರುವುದು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹರ್ಷ ಮೂಡಿಸಿದೆ. ಜಲಾಶಯ ಗರಿಷ್ಠ ಮಟ್ಟ ತಲುಪಿರುವುದರಿಂದ ಮಂಗಳವಾರ ತಡ ರಾತ್ರಿ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಇದೇ ಪ್ರಮಾಣದಲ್ಲಿ ಒಳ ಹರಿವು ಇದ್ದರೆ ಪ್ಲಸ್ 103 ಮಟ್ಟದ ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.