ಕಾರವಾರ: ಭೂಕಂಪ ಅಥವಾ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಎದುರಿಸುವಷ್ಟು ಸುರಕ್ಷಿತವಾಗಿ ಕೈಗಾ ಅಣುವಿದ್ಯುತ್ ಸ್ಥಾವರಗಳನ್ನು ವಿನ್ಯಾಸ ಮಾಡಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೈಗಾ ಅಣುವಿದ್ಯುತ್ ಸ್ಥಾವರದ ನಿರ್ದೇಶಕ ಜೆ.ಪಿ. ಗುಪ್ತಾ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಕಂಪ ಹಾಗೂ ಸುನಾಮಿಯಿಂದ ಜಪಾನ್‌ನ ಅಣುಸ್ಥಾವರಗಳಿಗೆ ಹಾನಿ ಆಗಿರುವುದು ದುರದೃಷ್ಟಕರ ಘಟನೆ ಎಂದರು.
ಕೈಗಾ ಅಣು ಸ್ಥಾವರಗಳು ಭೂಕಂಪ ತೀವ್ರತಾ ವಲಯ 3ರಲ್ಲಿ ಬರುತ್ತವೆ. ಜಪಾನ್‌ನಲ್ಲಿ ನಡೆದಿರುವಷ್ಟು ಹೆಚ್ಚಿನ ತೀವ್ರತೆಯ ಭೂಕಂಪನ ಇಲ್ಲಿ ಸಂಭವಿಸುವ ಸಾಧ್ಯತೆ ಕಡಿಮೆ. ಇದೂ ಅಲ್ಲದೆ ಕೈಗಾ ಅಣು ಸ್ಥಾವರಗಳು ಅರಬ್ಬಿ ಸಮುದ್ರದಿಂದ 50 ಕಿಲೋ ಮೀಟರ್ ದೂರದಲ್ಲಿವೆ. ಒಂದು ವೇಳೆ ಭೂಕಂಪ ನಡೆದರೂ ಸ್ಥಾವರಗಳಿಂದ ವಿಕಿರಣ ಸೋರಿಕೆ ಆಗುವ ಅಪಾಯವಿಲ್ಲ. ಉನ್ನತ ಗುಣಮಟ್ಟದಲ್ಲಿ ಸ್ಥಾವರಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ಗುಪ್ತಾ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.