ADVERTISEMENT

ಕೊಂಕಣ ಮಾರ್ಗದಲ್ಲಿ ರೈಲು ರದ್ದು

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಕಾರವಾರ: ಮಳೆಯಿಂದ ಮಹಾರಾಷ್ಟ್ರದ ರತ್ನಗಿರಿ ಬಳಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಕೂಡ ಕೊಂಕಣ ಮಾರ್ಗದಲ್ಲಿ ಕೆಲ ರೈಲುಗಳ ಸಂಚಾರ ರದ್ದಾಯಿತು. 

ಮುಂಬೈ-ಮಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರದ್ದುಗೊಂಡ ಪ್ರಮುಖ ರೈಲು. ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಕಾರವಾರಕ್ಕೆ ಆಗಮಿಸಿದ  ತಿರುವನಂತಪುರ- ಹಜರತ್ ನಿಜಾಮುದ್ದೀನ್ `ರಾಜಧಾನಿ~ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಬದಲಿಸಲಾಯಿತು. ಇದರಿಂದ ಈ ರೈಲು ಲೋಂಡಾ, ಮೀರಜ್ ಮಾರ್ಗವಾಗಿ ದೆಹಲಿಯತ್ತ ಸಾಗಿತು.

ಕಾರವಾರ ನಿಲ್ದಾಣಕ್ಕೆ ಶುಕ್ರವಾರ ಮಧ್ಯರಾತ್ರಿ 12ಕ್ಕೆ ಆಗಮಿಸಬೇಕಿದ್ದ ಎರ್ನಾಕುಲಂ- ಹಜರತ್ ನಿಜಾಮುದ್ದೀನ್ `ಮಂಗಳಾ ಎಕ್ಸ್‌ಪ್ರೆಸ್~ ರೈಲು ಶನಿವಾರ ಬೆಳಗಿನ ಜಾವ 6ಕ್ಕೆ ಆಗಮಿಸಿದಾಗ ಇಲ್ಲಿನ ನಿಲ್ದಾಣದಲ್ಲಿ ಅದನ್ನು ನಿಲ್ಲಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.