ADVERTISEMENT

ಗಡಿ ನೆಲ ದಾಬಕಾದಲ್ಲಿ ಸಂಭ್ರಮದ ಕನ್ನಡ ಹಬ್ಬ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:30 IST
Last Updated 8 ಮಾರ್ಚ್ 2011, 18:30 IST
ಗಡಿ ನೆಲ ದಾಬಕಾದಲ್ಲಿ ಸಂಭ್ರಮದ ಕನ್ನಡ ಹಬ್ಬ
ಗಡಿ ನೆಲ ದಾಬಕಾದಲ್ಲಿ ಸಂಭ್ರಮದ ಕನ್ನಡ ಹಬ್ಬ   

ಔರಾದ್: ಬಹುಸಂಖ್ಯಾತ ಮರಾಠಿ ಭಾಷಿಕರು ಇರುವ ತಾಲ್ಲೂಕಿನ ದಾಬಕಾದಲ್ಲಿ ಮಂಗಳವಾರ ಮೊಟ್ಟಮೊದಲ ಬಾರಿಗೆ ಕನ್ನಡದ ಕಹಳೆ ಮೊಳಗಿದೆ.ದಾಬಕಾ ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಗಡಿ ಭಾಗದ ಜನರು ಕನ್ನಡ ಹಬ್ಬವನ್ನು ಉತ್ಸಾಹದಿಂದ ಆಚರಿಸಿದರು. ಎಂದೂ ಕನ್ನಡ ಭಾಷೆಯ ಬ್ಯಾನರ್ ಕಾಣದ ಈ ಗ್ರಾಮದಲ್ಲಿ ಇಂದು ಎಲ್ಲೆಡೆ ಕನ್ನಡಮಯ ಪರಿಸರ ನಿರ್ಮಾಣವಾಗಿ ಅಭಿಮಾನಿಗಳು ಮೈಮರೆತು ಕುಣಿಯುವಂತೆ ಮಾಡಿತು.

ಇದನ್ನೆಲ್ಲ ಕಣ್ಣಾರೆ ಕಂಡ ಹಿರಿಯ ಸಾಹಿತಿ ಮಾಣಿಕರಾವ ಬಿರಾದಾರ್, ‘ನಾನು ಇಂಥದೊಂದು ಸಮ್ಮೇಳನದ ಅಧ್ಯಕ್ಷನಾಗಿದ್ದು ನನ್ನ ಸುದೈವ‘ ಎಂದು ಬಣ್ಣಿಸಿದರು. ಕನ್ನಡ ಶಿಕ್ಷಕರಾಗಿ ಬಂದು ಮರುದಿನವೇ ಇಲ್ಲಿಂದ ಜಾಗ ಖಾಲಿ ಮಾಡುವಂಥ ಹಿಂದಿನ ಕನ್ನಡದ ಸ್ಥಿತಿಗತಿ ನೆನಪಿಸಿಕೊಂಡರು. ಗಡಿ ಭಾಗದ ಆಚೆ ಮತ್ತು ಈಚೆ ಇರುವ ಪ್ರದೇಶಗಳಲ್ಲಿ ಕನ್ನಡ ಕಟ್ಟುವ ಕೆಲಸ ನಡೆಯಬೇಕು ಎಂದರು.

ಸಾನ್ನಿಧ್ಯ ವಹಿಸಿದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಆಶೀರ್ವನ ನೀಡಿ, ದಾಬಕಾ ಜನರು ಮರಾಠಿ ಭಾಷಿಕರಾದರೂ ಅವರಲ್ಲಿ ಕನ್ನಡದ ಬಗ್ಗೆ ತುಂಬಾ ಅಭಿಮಾನ ಇದೇ ಎನ್ನುವುದಕ್ಕೆ ಈ ಸಮ್ಮೇಳನ ಯಶಸ್ವಿಯಾಗಿರುವುದೇ ಸಾಕ್ಷಿ  ಎಂದು ತಿಳಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಜಿಪಂ. ಸದಸ್ಯೆ ರಾಜಶ್ರೀ ಪಾಟೀಲ, ನೀಲಮ್ಮ ವಡ್ಡೆ, ಸಿಪಿಐ ವಿನೋದಕುಮಾರ ಮಾತನಾಡಿದರು. ತಾಪಂ. ಅಧ್ಯಕ್ಷ ಶ್ರೀರಂ ಪರಿಹಾರ, ಗ್ರಾಪಂ ಅಧ್ಯಕ್ಷೆ ಜ್ಞಾನಬಾಯಿ, ಸತೀಶ ಪಾಟೀಲ, ಶಿವಾನಂದ ವಡ್ಡೆ ಉಪಸ್ಥಿತರಿದ್ದರು. ಪ್ರಶಾಂತ ಮಠಪತಿ ಸ್ವಾಗತಿಸಿದರು. ಚಂದ್ರಕಾಂತ ನಿರ್ಮಳೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.