ರಾಯಬಾಗ: ಕಳೆದ ಬುಧವಾರ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.ರಾಯಬಾಗ ಪೊಲೀಸ್ ಠಾಣೆಯ ವ್ಯಾಪ್ತಿಯ ಕಟಕಬಾವಿ ಕ್ರಾಸ್ ಹತ್ತಿರ ಬುಧವಾರ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ನಾಲ್ವರು ಗಾಯಗೊಂಡಿದ್ದರು.
ಇಟನಾಳ ಗ್ರಾಮದ ನಿಂಗಪ್ಪ ಸೋಮನಿಂಗ ಗೊಂಡಿ, ಮಹಾಂತೇಶ ಭೂಪಾಲ ಬೆನ್ನಾಳಿ ಹಾಗೂ ಖನದಾಳದ ಸದಾಶಿವ ಮಾರುತಿ ಮೋರೆ, ಶ್ರೀಶೈಲ ಕಲಗೌಡ ಪಾಟೀಲ, ವಕೀಲರಾದ ಶ್ರೀಶೈಲ ಬಾಬು ಹೊಸಟ್ಟಿ ಅವರನ್ನು ಬಂಧಿಸಲಾಗಿದೆ ಎಂದು ರಾಯಬಾಗ ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಇಟ್ನಾಳದ ಸದಾಶಿವ ಡಾಂಗೆ ಅವರು 14 ಜನರ ವಿರುದ್ಧ ಪೊಲೀಸರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.