ADVERTISEMENT

ಗುಡ್ಡ ಕುಸಿತ: ನೀರು ಹರಿಯಲು ಅಡಚಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಕಂಪ್ಲಿ:  ನೀಲಂ ಚಂಡಮಾರುತದ ಪರಿಣಾಮ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸೋಮವಾರ ಮಧ್ಯರಾತ್ರಿ ಗುಡ್ಡ ಕುಸಿದು ತುಂಗಭದ್ರಾ ಬಲದಂಡೆ ಕೆಳಮಟ್ಟದ (ಎಲ್‌ಎಲ್‌ಸಿ) ಕಾಲುವೆಗೆ ಬೃಹತ್ ಗಾತ್ರದ ಕಲ್ಲುಗಳು ಬಿದ್ದ ಪರಿಣಾಮ ಕಾಲುವೆಯಲ್ಲಿ ನೀರು ಹರಿಯಲು ಅಡಚಣೆಯಾಗಿದೆ.

ಕಲ್ಲು ಬಿದ್ದ ಸ್ಥಳದಿಂದ ಹಿಂದಕ್ಕೆ ಕಾಲುವೆಯಲ್ಲಿ ನೀರಿನ ಒತ್ತಡ ಹೆಚ್ಚಾಗಿ ನೀರು ಕಾಲುವೆಯಿಂದ ಹೊರಕ್ಕೆ ಹರಿದು ಪಂಪಾವಿದ್ಯಾಪೀಠದ ಎದುರಿಗಿರುವ ಬತ್ತದ ಗದ್ದೆಗೆ ನುಗ್ಗಿದ್ದರಿಂದ ಬೆಳೆಗೆ ಹಾನಿಯಾಗಿದೆ.

ಮಂಗಳವಾರ ಬೆಳಿಗ್ಗೆ, ಈ ವಿಷಯ ತುಂಗಭದ್ರಾ ಮಂಡಳಿ ಅಧಿಕಾರಿಗಳ ಗಮನಕ್ಕೆ ಬಂದ ಬಂತರ ನೀರು ನಿಲ್ಲಿಸಿದರು.  ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಕೃಷ್ಣನ್ ಉನ್ನಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಶ್ರೀನಿವಾಸರೆಡ್ಡಿ, ಎಇಇ ನಾರಾಯಣ ನಾಯಕ, ಎಡಿಒ ಶ್ರೀಕಾಂತರೆಡ್ಡಿ, ಸಹಾಯಕ ಎಂಜಿನಿಯರ್ ರಂಗನಾಥ ಭೇಟಿ ನೀಡಿ ಪರಿಶೀಲಿಸಿದರು.ಕರ್ನಾಟಕ, ಆಂಧ್ರಪ್ರದೇಶ ರೈತರಿಗೆ ನೀರಿನ ತೊಂದರೆಯಾಗದಂತೆ ಆದಷ್ಟು ತ್ವರಿತವಾಗಿ ಕಾಲುವೆಯಲ್ಲಿ ಬಿದ್ದ ಭಾರಿ ಗಾತ್ರದ ಕಲ್ಲುಗಳನ್ನು ತೆರವುಗೊಳಿಸಲಾಗುವುದು. ಅಲ್ಲಿಯವರೆಗೆ ರೈತರು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.