ADVERTISEMENT

ಗೂಳೂರಿಗೆ ಸಿಟಿ ಬಸ್ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ತುಮಕೂರು: ತಾಲ್ಲೂಕಿನ ಗೂಳೂರು ಗ್ರಾಮದಲ್ಲಿರುವ ಇತಿಹಾಸಪ್ರಸಿದ್ಧ ಗಣೇಶನ ದೇಗುಲಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರಾರಂಭಿಸಿರುವ ಸಿಟಿ ಬಸ್‌ಗೆ ಶಾಸಕ ಸುರೇಶ್‌ಗೌಡ ಶನಿವಾರ ಚಾಲನೆ ನೀಡಿದರು.

ವಿಶೇಷವಾಗಿ ಅಲಂಕರಿಸಲಾಗಿದ್ದ ಬಸ್‌ಗಳಿಗೆ ಪೂಜೆ ಮಾಡುವ ಮೂಲಕ ಗ್ರಾಮಸ್ಥರು ಸಿಟಿಬಸ್ ಸಂಚಾರವನ್ನು ಸಂಭ್ರಮದಿಂದ ಸ್ವಾಗತಿಸಿದರು.ಪ್ರಾಯೋಗಿಕವಾಗಿ ಈ ಮಾರ್ಗದಲ್ಲಿ ಎರಡು ಬಸ್‌ಗಳನ್ನು ಓಡಿಸಲಾಗುತ್ತಿದೆ. ತಲಾ ಅರ್ಧ ಗಂಟೆ ಅಂತರದಲ್ಲಿ ಬಸ್‌ಗಳು ಗೂಳೂರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ತಿಳಿಸಿದರು.

ಬಸ್‌ಗಳ ಆದಾಯ ಸಂಗ್ರಹ ಮತ್ತು ಪ್ರಯಾಣಿಕರ ದಟ್ಟಣೆ ಗಮನಿಸಿ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಮರಳೂರು ದಿಣ್ಣೆಯಿಂದ ಗೂಳೂರುವರೆಗೆ ಬಸ್‌ಗಳಿಗೆ ಹತ್ತುವ- ಇಳಿಯುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ ಎಂದು ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಶಾಸಕರಾದ ಶಿವಣ್ಣ ಮತ್ತು ಸುರೇಶ್‌ಗೌಡ ಸಿಟಿ ಬಸ್‌ನಲ್ಲಿಯೇ ನಗರಕ್ಕೆ ತೆರಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾರದಾ ನರಸಿಂಹಮೂರ್ತಿ, ಚಂದ್ರಪ್ಪ, ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ ವಿಶ್ವನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.