ADVERTISEMENT

ಗೋಡೆ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:05 IST
Last Updated 25 ಫೆಬ್ರುವರಿ 2011, 17:05 IST

ದಾವಣಗೆರೆ: ಹೊಸ ಮನೆ ಕಟ್ಟುವ ಉದ್ದೇಶದಿಂದ ಶಿಥಿಲಗೊಂಡಿದ್ದ ಹಳೆ ಮನೆಯನ್ನು ಬೀಳಿಸುವಾಗ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಹಳೆ ನಗರದ ದುಗ್ಗಮ್ಮನ ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮನೆ ಮಾಲೀಕರಾದ ಗಂಗಮ್ಮ (45) ಮೃತಪಟ್ಟ ಮಹಿಳೆ.ಕೂಲಿ ಕಾರ್ಮಿಕರಾದ ನಿಟ್ಟುವಳ್ಳಿಯ ರಂಗಪ್ಪ (35), ಕೊಂಡಜ್ಜಿಯ ಪರಶುರಾಮ್ (35), ಪರಸಪ್ಪ (30) ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಗಮ್ಮ  ಹೊಸ ಮನೆ ಕಟ್ಟುವುದಕ್ಕಾಗಿ ತಾವು ವಾಸವಿದ್ದ ಮನೆಯನ್ನು ಖಾಲಿ ಮಾಡಿದ್ದರು.

ಶುಕ್ರವಾರ ಹಳೇ ಮನೆ ಗೋಡೆ ಬೀಳಿಸುವಾಗ ಇದ್ದಕ್ಕಿದಂತೆ ಇನ್ನೊಂದು ಪಾರ್ಶ್ವದ ಗೋಡೆ ಕುಸಿಯಿತು. ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಗಮ್ಮ ಬದುಕಿ ಉಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.