ADVERTISEMENT

ಗೋರಖ್‌ಸಿಂಗ್ ವರದಿ ಅವೈಜ್ಞಾನಿಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಶಿವಮೊಗ್ಗ: ಗೋರಖ್‌ಸಿಂಗ್ ವರದಿಯನ್ನು ಭಾಗಶಃ ಸ್ವಾಗತಿಸಬಹುದೇ ವಿನಾ ಸಂಪೂರ್ಣವಾಗಿ ಅಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋರಖ್‌ಸಿಂಗ್ ಅವರನ್ನೂ ಸೇರಿದಂತೆ ಕೇವಲ 5 ಜನರನ್ನು ಮಾತ್ರವೇ ಹೊಂದಿದ್ದ ಸಮಿತಿ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿಗಳಿಗೆ ಮಾತ್ರವೇ ಭೇಟಿ ನೀಡಿ ಕೆಲವೇ ಮಂದಿಯ ಅಹವಾಲುಗಳನ್ನು ಸ್ವೀಕರಿಸಿ ವರದಿ ಸಿದ್ಧಪಡಿಸಿದೆ. ರೈತರ ಕಷ್ಟಗಳನ್ನು ಸರಿಯಾಗಿ ಆಲಿಸಿಲ್ಲ. ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶದ ರೈತರಿಗೆ ಮಾತ್ರವೇ ಬೆಂಬಲ ನೀಡಬೇಕು ಎಂದು ಹೇಳುವ ಮೂಲಕ ರಾಜ್ಯದ ಅಡಿಕೆ ಬೆಳೆಗಾರರನ್ನು ಒಡೆವ ಕೆಲಸವನ್ನು  ವರದಿ ಮಾಡಿದೆ ಎಂದರು.

ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಸಾಲಮನ್ನಾ ಮಾಡಬೇಕು. ಪರ್ಯಾಯ ಬೆಳೆಗೆ ಉತ್ತೇಜನ ನೀಡಬೇಕು. ರೋಗಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳು ನಡೆಯಬೇಕು. ಎಂಬ ಅಂಶಗಳೆಲ್ಲವೂ ಸರಿ. ಆದರೆ, ಬೋರ್‌ವೆಲ್ ಮತ್ತು ನಾಲಾ ನೀರಿನಿಂದ ಅಡಿಕೆ ಬೆಳೆದಿರುವವರಿಗೆ ಯಾವುದೇ ಸಹಕಾರ ನೀಡಬಾರದು ಎಂದು ವರದಿಯಲ್ಲಿ ಹೇಳಿರುವುದು ಅನ್ಯಾಯ. ಇವರ ಸಂಕಷ್ಟಗಳಿಗೆ ಯಾರು ಸ್ಪಂದಿಸಬೇಕು. ಆದ್ದರಿಂದ ಈ  ವರದಿ ಅಸಮರ್ಪಕವಾಗಿದೆ. ಈ ಕುರಿತು ಚರ್ಚೆ ನಡೆಯುವ ಅವಶ್ಯಕತೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.