
ಪ್ರಜಾವಾಣಿ ವಾರ್ತೆರಾಯಚೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಂಗಳವಾರ ಆಸ್ತಿ ಘೋಷಣೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಗ್ರಾಮ ಬೆಟ್ಟದೂರ ಗ್ರಾಮದ ಸುತ್ತಮುತ್ತ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 19 ಎಕರೆ ಜಮೀನು, 1.20 ಎಕರೆಯಲ್ಲಿ 36 ನಿವೇಶನ (ಇದರಲ್ಲಿ ನಾಲ್ಕು ಮಾರಾಟ), ಬೆಟ್ಟದೂರಲ್ಲಿ ಸ್ವಂತಮನೆ, ದನದ ಕೊಟ್ಟಿಗೆ, ಒಂದು ಶೆಡ್ ಇರುವುದಾಗಿ ವಿವರಿಸಿದರು.
ರಾಯಚೂರಲ್ಲಿ ಒಂದು ನಿವೇಶನ, ಒಂದು ದ್ವಿಚಕ್ರವಾಹನ ಇದೆ. ಬ್ಯಾಂಕಿನಲ್ಲಿ 5 ಲಕ್ಷ, ನೀರಮಾನ್ವಿ ಬ್ಯಾಂಕ್‌ನಲ್ಲಿ 90 ಸಾವಿರ, 10 ಲಕ್ಷ ತೋಟಗಾರಿಕೆ ಸಾಲ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.