ADVERTISEMENT

ಚಿಕ್ಕಬಳ್ಳಾಪುರ: 108 ಮಂದಿ ನೇತ್ರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 18:45 IST
Last Updated 19 ಜೂನ್ 2011, 18:45 IST

ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳು ಭಾನುವಾರ ಇಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ತಾಲ್ಲೂಕು ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಒಟ್ಟು 108 ಮಂದಿ ಪಾಲ್ಗೊಂಡಿದ್ದರು.

ಸಾಮಾನ್ಯ ಪ್ರಮಾಣದ ದೃಷ್ಟಿದೋಷದಿಂದ ಬಳಲುತ್ತಿರುವವರಿಗೆ ಸ್ಥಳದಲ್ಲೇ ಔಷಧಿಗಳನ್ನು ನೀಡಲಾಯಿತು. ಗಂಭೀರ ಪ್ರಮಾಣದ ದೃಷ್ಟಿದೋಷದಿಂದ ಬಳಲುತ್ತಿರುವ 45 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ನಿಧಿ, ಶಿಬಿರದ ವ್ಯವಸ್ಥಾಪಕ ಜಯರಾಮೇಗೌಡ ಮತ್ತು ನೇತ್ರತಜ್ಞ ಜಯರಾಮರೆಡ್ಡಿ ದೃಷ್ಟಿದೋಷದಿಂದ ಬಳಲುತ್ತಿರುವವರ ಕಣ್ಣುಗಳನ್ನು ತಪಾಸಣೆ ಮಾಡಿದರು. ಶಿಬಿರದ ಪ್ರಯುಕ್ತ ಸ್ಥಳದಲ್ಲೇ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, `ದೃಷ್ಟಿದೋಷ ಸಂಬಂಧಿ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ನಿರಾಸಕ್ತಿ ತೋರಿದರೆ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆರೋಗ್ಯದ ಬಗ್ಗೆ ಜಾಗ್ರತೆಯಿರಲಿ~ ಎಂದು ಸಲಹೆ ಮಾಡಿದರು.

ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಆಂಜನೇಯರೆಡ್ಡಿ, ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಯಲುವಹಳ್ಳಿ ಕುಮದೇಂದು ಮಹರ್ಷಿ ಕನ್ನಡ ಯುವಕರ ಸಂಘದ ಸದಸ್ಯರಾದ ಮುನೇಗೌಡ, ವೆಂಕಟರಾಜು, ವಿ.ಮುನಿರಾಜು, ಕೆ.ಮುನಿರಾಜುಮ, ಎಂ.ಎಸ್.ಮುನಿರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.