ADVERTISEMENT

ಜನಗಣತಿ ಯಶಸ್ವಿಗೊಳಿಸಲು ಕರೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:30 IST
Last Updated 1 ಫೆಬ್ರುವರಿ 2011, 17:30 IST

ಕುಶಾಲನಗರ: ‘ದೇಶದ ಜನತೆಗೆ ಉತ್ತಮ ಯೋಜನೆ ಮತ್ತು ಭವಿಷ್ಯವನ್ನು ರೂಪಿಸಲು ಸಹಕಾರಿಯಾದ  ಜನಗಣತಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಗಣತಿದಾರರು ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು  ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಮಂಗಳವಾರ ಕರೆ ನೀಡಿದರು.

ಸಮೀಪದ ಸುಂಟಿಕೊಪ್ಪದಲ್ಲಿ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಭಾರತೀಯ ಜನಗಣತಿ-  2011ರ ಕುರಿತು ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಎರಡನೇ ಹಂತದ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಜನಗಣತಿ ಯೋಜನೆಯು ರಾಷ್ಟ್ರೀಯ ಯೋಜನೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.

‘ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯದಿಂದ ಜನವಸತಿ ಪ್ರದೇಶಗಳಲ್ಲಿನ ಸ್ಥಿತಿಗತಿ, ವಾಸದ ಮನೆಗಳ  ಕೊರತೆ ಮತ್ತು ಅದರಿಂದ ಮನೆಗಳ ಪೂರೈಕೆಗೆ ಕೈಗೊಳ್ಳಬೇಕಾದ ವಸತಿ ಯೋಜನೆಯನ್ನು ರೂಪಿಸಲು  ಪರಿಪೂರ್ಣ ಮಾಹಿತಿ ಸಿಗಲಿದೆ’ ಎಂದರು.

‘ಫೆ.9 ರಿಂದ ಆರಂಭಗೊಳ್ಳಲಿರುವ ಜನಗಣತಿಯು 28 ಕ್ಕೆ ಕೊನೆಗೊಳ್ಳಲಿದೆ. ಫೆ.28 ರಂದು ರಾತ್ರಿ ವಲಸೆಗಾರರು ಮತ್ತು ನಿರ್ವಸತಿಗರ ಜನಗಣತಿ ಸಮೀಕ್ಷೆ ನಡೆಸಬೇಕು’ ಎಂದರು.

ತಹಶೀಲ್ದಾರ್ ಎ.ದೇವರಾಜ್ ಮಾತನಾಡಿದರು. ಎಂ.ಎನ್.ಲತಾ,  ಕೆ.ಚಂದ್ರಹಾಸಭಟ್ ತರಬೇತಿ  ನೀಡಿದರು. ಜನಗಣತಿ ಅಧಿಕಾರಿ ಹನುಮಂತಪ್ಪ, ಸಾಂಖಿಕ ಅಧಿಕಾರಿ ಲಿಂಗರಾಜು, ಕಂದಾಯ ನಿರೀಕ್ಷಕ  ಎಸ್.ಕೆ.ಧರ್ಮಪ್ಪ, ಸಾಂಖಿಕ ನಿರೀಕ್ಷಕ ಕೆ.ವೆಂಕಟರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.