ADVERTISEMENT

ಜನಗಣತಿ ಸಿಬ್ಬಂದಿಗೆ ತರಬೇತಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 20:10 IST
Last Updated 21 ಜನವರಿ 2011, 20:10 IST

ರಾಮನಗರ:  ಭಾರತೀಯ ಜನಗಣತಿ -2011ರ ಸಂಬಂಧ ರಾಮನಗರ ತಾಲ್ಲೂಕಿನ ಗಣತಿದಾರರಿಗೆ, ಮೇಲ್ವಿಚಾರಕರಿಗೆ ಹಾಗೂ ಇತರೆ ಸಿಬ್ಬಂದಿಗೆ ಇದೇ 22ರಿಂದ (ಶನಿವಾರ) ಇದೇ 31ರವರೆಗೆ ಹೋಬಳಿ ಮಟ್ಟದಲ್ಲಿ ತರಬೇತಿ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್  ಡಿ.ಬಿ.ನಟೇಶ್ ಅವರು  ತಿಳಿಸಿದ್ದಾರೆ.

ಈ ತರಬೇತಿಗೆ ನೇಮಕ ಮಾಡಿದ ಗಣತಿದಾರರು ಮತ್ತು ಮೇಲ್ವಿಚಾರಕರು ತಪ್ಪದೆ ತರಬೇತಿಯಲ್ಲಿ ಭಾಗವಹಿಸಿ, ತರಬೇತಿ ಪಡೆದು ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೂಟಗಲ್ ಹೋಬಳಿ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯದ 68 ಸಿಬ್ಬಂದಿಗೆ ರಾಮನಗರದ ಬಿಎಸ್‌ವಿಪಿಯಲ್ಲಿ ಇದೇ 22ರಿಂದ 24ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ.

ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ಜನಗಣತಿ ಕಾರ್ಯದ 69 ಸಿಬ್ಬಂದಿಗೆ ರಾಮನಗರದ ಬಿಎಸ್‌ವಿಪಿಯಲ್ಲಿ ಇದೇ 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ಏರ್ಪಡಿಸಲಾಗಿದೆ.

ಕೈಲಾಂಚ ಹೋಬಳಿಯಲ್ಲಿನ ಜನಗಣತಿಯ 83 ಸಿಬ್ಬಂದಿಗೆ ಅವ್ವೇರಹಳ್ಳಿಯ ಎಸ್‌ಆರ್‌ಎಸ್ ಬೆಟ್ಟದಲ್ಲಿ ಇದೇ 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಬಿಡದಿ ಹೋಬಳಿಯಲ್ಲಿನ ಜನಗಣತಿ ಕಾರ್ಯದ ತಂಡ-1ರ 76 ಹಾಗೂ ತಂಡ -2ರ 75 ಸಿಬ್ಬಂದಿಗೆ ಇದೇ 29ರಿಂದ 31ರವರೆಗೆ ಬಿಡದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಜನಗಣತಿ ಕುರಿತ ತರಬೇತಿ ನಡೆಯಲಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.