ADVERTISEMENT

ಜೋಗ: ಪ್ರತಿದಿನ ಸಂಗೀತ ಕಾರಂಜಿ, ಲೇಸರ್ ಷೋ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ಜೋಗ: ಪ್ರತಿದಿನ ಸಂಗೀತ ಕಾರಂಜಿ, ಲೇಸರ್ ಷೋ
ಜೋಗ: ಪ್ರತಿದಿನ ಸಂಗೀತ ಕಾರಂಜಿ, ಲೇಸರ್ ಷೋ   

ಕಾರ್ಗಲ್ (ಶಿವಮೊಗ್ಗ ಜಿಲ್ಲೆ): ವಿಶ್ವವಿಖ್ಯಾತ ಜೋಗ ಜಲಪಾತ ಈಚೆಗೆ ನೀರಿನ ಕೊರತೆಯಿಂದ ಸೊರಗುತ್ತಿದ್ದರೂ ಜೋಗ ಅಭಿವೃದ್ಧಿ ಪ್ರಾಧಿಕಾರವು ಜೋಗವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹೊಸದಾಗಿ ಆರಂಭಿಸಿರುವ ಸಂಗೀತ ನೃತ್ಯ ಕಾರಂಜಿ ಮತ್ತು ಲೇಸರ್ ಷೋ ಪ್ರವಾಸಿಗರನ್ನು ನಿರೀಕ್ಷೆಗೂ ಮೀರಿ ಸೆಳೆಯುತ್ತಿದೆ.

ಪ್ರತಿದಿನ ರಾತ್ರಿ 7.30ರಿಂದ 8ರವರೆಗೆ ನಡೆಯುವ ಈ ಕಾರ್ಯಕ್ರಮ ಪ್ರವಾಸಿಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ರೂ 1.25 ಕೋಟಿ ವೆಚ್ಚವಾಗಿದೆ. ಕೋಲ್ಕತ್ತ ಮೂಲದ ಪ್ರೀಮಿಯರ್ ಲೀಗ್ ಕಂಪೆನಿಯು ನೂತನ ತಂತ್ರಜ್ಞಾನದಿಂದ ಇದನ್ನು ನಿರ್ಮಿಸಿದೆ. ಸಂಪೂರ್ಣ ಕಂಪ್ಯೂಟರೀಕೃತ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಿರುವ ನೃತ್ಯ ಕಾರಂಜಿಯನ್ನು 5 ಮಾದರಿಯಾಗಿ  ಜೋಡಿಸಿದ್ದಾರೆ.

ಉಚಿತ ಪ್ರವೇಶ: ಈ ಎಲ್ಲಾ ಕಾರ್ಯಕ್ರಮ ವೀಕ್ಷಿಸಲು ಪ್ರವೇಶ ಉಚಿತ.  ವಿಶಾಲವಾದ ಬಯಲಿನಲ್ಲಿ ಒಳಾಂಗಣ ಸ್ಟೇಡಿಯಂ ಮಾದರಿಯಲ್ಲಿ ಕಲ್ಲು ಬೆಂಚುಗಳನ್ನು ಜೋಡಿಸಲಾಗಿದೆ. ಏಕಕಾಲಕ್ಕೆ ಒಂದು ಸಾವಿರ ಜನರು ಕುಳಿತು ಈ ಸಂಗೀತ ಕಾರಂಜಿ ಮತ್ತು ಲೇಸರ್ ಷೋ ವೀಕ್ಷಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.