ADVERTISEMENT

ನೈತಿಕ ನೆಲೆಗಟ್ಟು ನಿಜವಾದ ಆಸ್ತಿ: ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ದಾವಣಗೆರೆ: ನೈತಿಕ ನೆಲೆಗಟ್ಟು ಪ್ರತಿಯೊಬ್ಬ ಮನುಷ್ಯನ ನೈಜ ಆಸ್ತಿ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರಿನ ನಿರಂತರ ಪ್ರಕಾಶನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೇಖಕ ಬಸವರಾಜ ಶಿವಪುರ ಅವರ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಭಾರತೀಯ ಸಾತ್ವಿಕ ಹಿನ್ನೆಲೆಯಲ್ಲಿ ರೂಪುಗೊಂಡ `ಶ್ರೀ ಸಂಸ್ಕೃತಿ~ ಒಂದು ಶ್ರೀಮಂತ ಸಂಸ್ಕೃತಿಯಾಗಿದೆ ಎಂದರು.

`ಶಿವಸಂಚಲನ~ ಕೃತಿ ಕುರಿತು ನಾ. ಲೋಕೇಶ್ ಒಡೆಯರ್, ತರಳಬಾಳು ಗುರು ಪರಂಪರೆ ಕುರಿತ `ಶ್ರೀ~ ಪುಸ್ತಕದ ಬಗ್ಗೆ ಡಾ.ಎಚ್.ವಿ. ವಾಮದೇವಪ್ಪ, ವಚನಕಾರರನ್ನು ಕುರಿತ `ನುಡಿ ಜಾಣರು-ನಡೆ ಧೀರರು~ ಕೃತಿ ಬಗ್ಗೆ ಡಾ.ಪ್ರಕಾಶ್ ಹಲಗೇರಿ, `ಕಾವ್ಯ-ಕಾವೇರಿ~ ಕುರಿತು ಬಿ.ಎಂ. ಸದಾಶಿವಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಪಂಡಿತಾರಾಧ್ಯ ಶ್ರೀ, ಲೇಖಕ ಬಸವರಾಜ್ ಶಿವಪುರ ಹಾಗೂ ಎಚ್. ಎಸ್. ಶಾಂತವೀರಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ. ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಿ.ಎಂ. ಗಣೇಶ್ ಸ್ವಾಗತಿಸಿದರು. ಚೇತನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾಗರಾಜ್‌ಸಿರಿಗೆರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.