ADVERTISEMENT

ಬಾಗೇಪಲ್ಲಿ: ಶಿಕ್ಷಕರಿಗೆ ರಾಷ್ಟ್ರಧ್ವಜ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಬಾಗೇಪಲ್ಲಿ: ಶಿಕ್ಷಕರಿಗೆ ರಾಷ್ಟ್ರಧ್ವಜ ಕಾರ್ಯಾಗಾರ
ಬಾಗೇಪಲ್ಲಿ: ಶಿಕ್ಷಕರಿಗೆ ರಾಷ್ಟ್ರಧ್ವಜ ಕಾರ್ಯಾಗಾರ   

ಬಾಗೇಪಲ್ಲಿ: `ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ದೇಶಪ್ರೇಮದ ಅರಿವು ಮೂಡಿಸುವ ಮೂಲಕ ಹೊಸ ಚೈತನ್ಯ ತುಂಬಬೇಕಿದೆ~ ಎಂದು ಭಾರತ ಸೇವಾದಲ ಹಿರಿಯ ಸ್ವಯಂಸೇವಕ ಸುಬ್ಬಣ್ಣ ತಿಳಿಸಿದರು.

ಶಾಲಾ ಶಿಕ್ಷಕರಿಗಾಗಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರೆ ಉತ್ತಮ ನಾಗರಿಕರಾಗುತ್ತಾರೆ. ಸಾಮಾಜಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಪುರಸಭೆ ಸದಸ್ಯ ಬಿ.ಆರ್.ನರಸಿಂಹನಾಯ್ಡು, `ದೇಶದೆಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ಕೊನೆಗಾಣಿಸಲು ಎಲ್ಲರೂ ಕೈಜೋಡಿಸಬೇಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೇನಾನಿಗಳ ತತ್ವ ಮತ್ತು ಆದರ್ಶ ಇಂದಿನ ಯುವಜನರಿಗೆ ಮಾದರಿಯಬಾಗಬೇಕು~ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್.ನಾರಾಯಣಸ್ವಾಮಿ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ನಟರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ನರಸಿಂಹಪ್ಪ, ಭಾರತ ಸೇವಾದಲ ಅಧ್ಯಕ್ಷ ಶ್ರೀನಿವಾಸ್, ಭಾರತ ಸೇವಾದಲ ಜಿಲ್ಲಾ ಸಂಘಟಕ ಮಹೇಶ್‌ಗೌಡ, ಸಂಪನ್ಮೂಲ ವ್ಯಕ್ತಿ ಬಾಲಪ್ಪ, ಬಾಲರಾಜು ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.