ADVERTISEMENT

ಬಿಎಸ್‌ವೈ ಹೊಸ ಪಕ್ಷಕ್ಕೆ ಶಾಸಕ ಹರೀಶ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 19:30 IST
Last Updated 4 ನವೆಂಬರ್ 2012, 19:30 IST

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ಜನತಾ ಪಕ್ಷವನ್ನು ತಾವು ಬೆಂಬಲಿಸಲಿದ್ದು, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮುಂದಿನ ಚುನಾವಣೆ ಎದುರಿಸಲು ಕಾರ್ಯಪ್ರವೃತ್ತರಾಗುವುದಾಗಿ ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.

 ಯಡಿಯೂರಪ್ಪನವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡಿಸುವ ಬಗ್ಗೆ ವರಿಷ್ಠರ ಜತೆ ರಾಜ್ಯದ ಸಂಸದರ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರಕ್ಕೆ ಬರಬೇಕಾಯಿತು ಎಂದರು.

ಸಿದ್ದೇಶ್ವರ ಕಿಡಿ: `ನಾನಿನ್ನೂ ಬಿಜೆಪಿ ಸಂಸತ್ ಸದಸ್ಯ. ಬಿಜೆಪಿಯಲ್ಲೇ ಇದ್ದೇನೆ.  ಹರೀಶ್ ನನ್ನ ವಕ್ತಾರರೇ? ಅವರು ಇಂಥ ಬಾಲಿಶ ಹೇಳಿಕೆ ನೀಡಬಾರದು~ ಎಂದು ಸಂಸದ  ಜಿ.ಎಂ. ಸಿದ್ದೇಶ್ವರ, ಕಟುವಾಗಿ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.