ADVERTISEMENT

ಬೈಪಾಸ್ ರಸ್ತೆ ನಿರ್ಮಿಸಲು ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಗೋಣಿಕೊಪ್ಪಲು: ಪಟ್ಟಣದ ಬೈಪಾಸ್ ರಸ್ತೆಯ ಮುಂದುವರಿದ ಭಾಗದ ಕಾಮಗಾರಿಗೆ ಅರುವತ್ತೊಕ್ಕಲು ಗ್ರಾ.ಪಂ. ವತಿಯಿಂದ ಬುಧವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಡಂದೇರ ಕೆ.ಗಣಪತಿ ಗುದ್ದಲಿ ಪೂಜೆ ಮಾಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಪಿಲಿಫೋಸ್ ಮ್ಯಾಥ್ಯೂ 220 ಮೀಟರ್ ಉದ್ದ 50 ಅಡಿ ಅಗಲದ ರಸ್ತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾ.ಪಂ. ನಿಧಿಯಿಂದ ನಿರ್ಮಿಸಲಾಗುತ್ತಿದೆ. ರೂ.25 ಲಕ್ಷ ವೆಚ್ಚದ ಈ ಹಣವನ್ನು ಮುಂದೆ ಎನ್‌ಆರ್‌ಇಜಿ ಯಿಂದ ಭರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಗೋಣಿಕೊಪ್ಪಲು ಮತ್ತು ಅರುವತ್ತೊಕ್ಕಲು ಗ್ರಾ.ಪ. ಜಾಗ ವಿವಾದದಿಂದಾಗಿ ಬೈಪಾಸ್ ರಸ್ತೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಸಮಸ್ಯೆ ಪರಿಹಾರವಾಗಿ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರಕಿದೆ. 2010 ಸೆ.27ರಂದು  ಎರಡು ಪಂಚಾಯಿತಿಗಳ  ಗಡಿಯನ್ನು ಸರ್ವೆ ಮಾಡುವ ಮೂಲಕ  ಗುರುತಿಸಿ ವಿವಾದ  ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಿದ್ದರೂ ಇದುವರೆಗೂ ಸರ್ವೆ ಕಾರ್ಯ ನಡೆದಿಲ್ಲ ಎಂದು ದೂರಿದರು.

 ತಾ.ಪಂ.ಸದಸ್ಯ ಕೋಳೆರ ದಯಾ ಚಂಗಪ್ಪ, ಗಾ.ಪಂ.ಸದಸ್ಯರಾದ ಕೆ.ಜಿ.ಕಿಶೋರ್, ಸುವಿನ್ ಮಾಚಯ್ಯ, ಎ.ಕೆ.ವಿಕ್ರಂ, ಎ.ರೀಟಾ, ಡಿ.ಪಿ. ಮೀನಾಕ್ಷಿ, ಕಾವೇರಿ, ಎಂ.ಎಂ.ಅಯ್ಯಣ್ಣ, ಮಾಜಿ ಅಧ್ಯಕ್ಷ ಬಾಬು, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರಾದ ಪ್ರಮೋದ್ ಗಣಪತಿ,  ಡ್ಯಾನ್, ರಾಜಶೇಖರ್, ಸೌಮ್ಯ, ರಮಾವತಿ, ಪ್ರಭಾವತಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.