ADVERTISEMENT

ಭಾವೈಕ್ಯ ಪ್ರತಿಬಿಂಬಿಸಿದ ಕೇರಳ ಸಮಾಜದ ಓಣಂ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:55 IST
Last Updated 25 ಸೆಪ್ಟೆಂಬರ್ 2011, 19:55 IST

ಕುಶಾಲನಗರ: ಪಟ್ಟಣದ ಕನ್ನಿಕಾ ಸಭಾಂಗಣದಲ್ಲಿ  ಕೇರಳ ಸಮಾಜದಿಂದ `ಓಣಂ~ ಅನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು

ಮಲೆಯಾಳಿ ಭಾಷಿಕರು ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಎಲ್ಲರೂ ಒಟ್ಟಾಗಿ ಆಚರಿಸುವ ಮೂಲಕ  ಭಾವೈಕ್ಯ ಪ್ರದರ್ಶಿಸಿದರು. ಪರಸ್ಪರ `ಓಣಂ~ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಉದ್ಘಾಟಿಸಿ ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಸಮಾಜದ ಅಧ್ಯಕ್ಷ ಕೆ.ಆರ್.ಶಿವಾನಂದನ್ ಅಧ್ಯಕ್ಷತೆ ವಹಿಸಿದ್ದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್, ಸಮಾಜದ ಉಪಾಧ್ಯಕ್ಷ ಪಿ.ಟಿ.ಸುಧೀಶ್  ಕುಮಾರ್, ಕಾರ್ಯದರ್ಶಿ ಎಂ.ಆರ್.ಬಾಲಕೃಷ್ಣನ್, ಕೆ.ಕೆ.ಭಾಸ್ಕರನ್, ಪಿ.ಕೆ.ವಿಜಯನ್, ಕೆ.ಬಿ.ಬಾಬು, ಸುಶೀಲಾ, ಎಂ.ಎಸ್.ಶಾಂತಿ,  ಎಂ. ಆರ್.ಕಣ್ಣನ್ ಇತರರು ಇದ್ದರು.

ವಿ.ಪಿ.ಪ್ರಕಾಶ್, ಮಾಥ್ಯೂ, ಪಾರ್ವತಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರು  ಸಾಂಪ್ರದಾಯಿಕ ಸೀರೆ ಧರಿಸಿ  ರಚಿಸಿದ `ಪುಷ್ಪ ರಂಗವಲ್ಲಿ~ ಆಕರ್ಷಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.