ADVERTISEMENT

ಮಾರಿಕುಪ್ಪಂ ರೈಲಿಗೆ ಹೆಚ್ಚುವರಿ ಮೂರು ಬೋಗಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:30 IST
Last Updated 16 ಫೆಬ್ರುವರಿ 2011, 18:30 IST

ಬಂಗಾರಪೇಟೆ: ಬೆಂಗಳೂರು- ಕೆಜಿಎಫ್ ಮಾರ್ಗದಲ್ಲಿ ರೈಲು ಪ್ರಯಾಣ ಇನ್ನು ಸುಖಕರವಾಗಲಿದೆ.ಬುಧವಾರದಿಂದ ಮಾರಿಕುಪ್ಪಂ ಎಕ್ಸ್‌ಪ್ರೆಸ್ ರೈಲಿಗೆ 3 ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.

ಬೋಗಿ ಅಳವಡಿಕೆ ವಿಷಯ ತಿಳಿದ ಈ ಮಾರ್ಗದ ರೈಲು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಬುಧವಾರ ಸಿಹಿ ಹಂಚಿ ಸಂತೋಷಪಟ್ಟರು.ರಜೆ ದಿನವಾದರೂ ಬುಧವಾರ ನಿಲ್ದಾಣಕ್ಕೆ ಬಂದು ಬೋಗಿಗಳನ್ನು ನೋಡಿ ಖುಷಿಪಟ್ಟರು.ಬೋಗಿಗಳನ್ನು ಅಳವಡಿಸುವ ಕುರಿತು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಈಚೆಗಷ್ಟೆ ಭರವಸೆ ನೀಡಿದ್ದರು.ಅದರಂತೆ ಬೋಗಿಗಳನ್ನು ಅಳವಡಿಸಿ ಜನತೆಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ.ಎಂ.ನಾರಾಯಣಸ್ವಾಮಿ ತಿಳಿಸಿದರು.

ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯ ಡಿ.ಕಿಶೋರ್‌ಕುಮಾರ್, ಪ್ರಮುಖರಾದ ಪಾರ್ಥಸಾರಥಿ, ರಾಮಚಂದ್ರ, ಸಿ.ವಿ.ಕೃಷ್ಣಪ್ಪ, ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಜೆ.ಸಿ.ಬಿ ನಾರಾಯಣಪ್ಪ, ಶಂಶುದ್ದೀನ್‌ಬಾಬು, ಶಾಂತಿನಗರ ಕೃಷ್ಣಮೂರ್ತಿ, ಅಜ್ಮತ್, ಅಪ್ಸರ್, ರಾಜನ್, ಸ್ಟ್ಯಾನ್ಲಿ, ಆಜಂ ಷರೀಫ್, ಲಯನ್ ಆದಿಲ್ ಪಾಷ, ಎಂ.ಎನ್.ಭಾರದ್ವಾಜ್, ನಾಗರತ್ನ, ಶಾರದ, ಕುಪ್ಪನಹಳ್ಳಿ ಆನಂದ್, ಕಿರಣ್, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.