ಕುಶಾಲನಗರ: ಈದ್- ಉಲ್- ಫಿತರ್ ಅನ್ನು ಮುಸ್ಲಿಮರು ಸೋಮವಾರ ಸಡಗರದಿಂದ ಆಚರಿಸಿದರು.
ಕುಶಾಲನಗರ, ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶಗಳಾದ ನಂಜರಾಯಪಟ್ಟಣ, ಕೂಡಿಗೆ, ಮುಳ್ಳುಸೋಗೆ, ಮಾದಾಪಟ್ಟಣ, ರಂಗಸಮುದ್ರ, ಏಳನೇ ಹೊಸಕೋಟೆ ಮತ್ತಿತರ ಕಡೆಗಳಲ್ಲಿ ಮುಸ್ಲಿಂ ಬಾಂಧವರು 30 ದಿನಗಳ ಉಪವಾಸದ ಬಳಿಕ ಚಂದ್ರನ ದರ್ಶನ ಪಡೆದು ಹಬ್ಬ ಆಚರಿಸಿದರು.
ಜಾಮಿಯಾ ಮಸೀದಿ, ಹಿಲಾಲ್ ಮಸೀದಿಗಳಲ್ಲಿ, ದಂಡಿನಪೇಟೆ ಮಸೀದಿ, ಜನತಾ ಕಾಲೊನಿ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದರು.
ಕುಶಾಲನಗರ ಪಟ್ಟಣದಲ್ಲಿ ಮುಖ್ಯ ರಸ್ತೆಯ ಮೂಲಕ ಗಂಧದಕೋಟೆಯವರೆಗೆ ಮೆರವಣಿಗೆ ನಡೆಸಿದರು. ನಂತರ ಗಂಧದಕೋಟೆಯಲ್ಲಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಜಾಮೀಯ ಮಸೀದಿ ಧರ್ಮಗುರು ಮುಫ್ತಿ ಮುದಾಫೀರ್ ಸಾಬ್ ಪ್ರವಚನ ನೀಡಿದರು.
ಹಬ್ಬದ ಅಂಗವಾಗಿ ಹೊಸ ಬಿಳಿಯ ವಸ್ತ್ರ ಧರಿಸಿದ್ದ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವಿಶೇಷ ಭೋಜನವನ್ನು ಒಟ್ಟಿಗೆ ಸೇವಿಸಿದರು. ಜಾಮೀಯಾ ಮಸೀದಿ ಅಧ್ಯಕ್ಷ ಬಷೀರ್ ಅಹ್ಮದ್, ಕಾರ್ಯದರ್ಶಿ ತನ್ವಿರ್ ಅಹಮ್ಮದ್, ಮುಖಂಡರಾದ ನಜೀರ್ ಅಹಮ್ಮದ್, ಅಬ್ದುಲ್ ಖಾದರ್, ಮೊಹಿದ್ದೀನ್, ಶಬ್ಬಿರ್ ಅಹ್ಮದ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.