ADVERTISEMENT

ರೂ 10 ಲಕ್ಷ ಮೌಲ್ಯದ ದಂತ ವಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಕಾರ್ಗಲ್ (ಶಿವಮೊಗ್ಗ ಜಿಲ್ಲೆ): ಸಮೀಪದ ಜೋಗದ ಸೀತಾಕಟ್ಟೆ ಸೇತುವೆ ಬಳಿ ಶನಿವಾರ ಸಂಜೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬಂಧಿಸಿ ರೂ. 10 ಲಕ್ಷ ಮೌಲ್ಯದ ಆನೆ ದಂತವನ್ನು ವಶಪಡಿಸಿಕೊಂಡಿದ್ದಾಗಿ ಕಾರ್ಗಲ್ ವಲಯ ಅರಣ್ಯಾಧಿಕಾರಿ ಆಲ್ವಿನ್ ತಿಳಿಸಿದ್ದಾರೆ.

ಬಂಧಿತರಾದ ಕೊಪ್ಪ ನಿವಾಸಿ ನಾಗರಾಜ್ ಭಟ್, ಸಾಗರ ಸಮೀಪದ ಅದರಂತೆ ನಿವಾಸಿಗಳಾದ ದ್ವಾರಕೀಶ್ ಮತ್ತು ದುರ್ಗಪ್ಪ ಅವರ ವಿರುದ್ಧ ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎರಡು ಅಡಿ ಉದ್ದದ ದಂತ 3.5 ಕೆಜಿ ತೂಕವಿದ್ದು, ಅದರ ಉಳಿದ ಭಾಗ ಈಗಾಗಲೇ ಮಾರಾಟ ಮಾಡಿರಬಹುದೆಂದು ಇಲಾಖೆ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.