ADVERTISEMENT

ವರದಾ-ದಂಡಾವತಿ ಸಂಗಮದಲ್ಲಿ ಬಂಗಾರಪ್ಪ ಚಿತಾಭಸ್ಮ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಸೊರಬ (ಶಿವಮೊಗ್ಗ ಜಿಲ್ಲೆ): `ಬಂಗಾರಪ್ಪ ಯಾರಿಗೂ ನೋವುಂಟು ಮಾಡಿ ಬೆಳೆದವರಲ್ಲ. ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ಬಡವರಿಗಾಗಿ ಮಿಡಿದವರು~ ಎಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ನುಡಿದರು.

ಭಾನುವಾರ ಬಂಕಸಾಣದ ಹೊಳೆಲಿಂಗೇಶ್ವರ ಕ್ಷೇತ್ರದಲ್ಲಿರುವ ವರದಾ-ದಂಡಾವತಿ ಸಂಗಮ ಕ್ಷೇತ್ರದಲ್ಲಿ ತಂದೆಯ ಚಿತಾಭಸ್ಮ ವಿಸರ್ಜಿಸಿ ಅವರು ಮಾತನಾಡಿದರು.

ಕುಬಟೂರಿನ ಮನೆಗೆ `ಬಂಗಾರ~ ಹಾಗೂ ಸಮನವಳ್ಳಿಯ ತೋಟಕ್ಕೆ `ಬಂಗಾರ ತೋಟ~ ಎಂದು ನಾಮಕರಣ ಮಾಡುವುದಾಗಿ ಅವರು ತಿಳಿಸಿದರು.

ಜ. 5ರಂದು ವೈಕುಂಠ ಸಮಾರಾಧನೆಯೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 50 ಸಾವಿರ ಅಭಿಮಾನಿಗಳು ಬರುವ  ನಿರೀಕ್ಷೆಯಿದೆ ಎಂದರು.

ಜ. 7ರಂದು ಗೋಕರ್ಣದಲ್ಲಿ ಬೆಳಿಗ್ಗೆ 9ರಿಂದ 11ರವರೆಗೆ ಅಂತಿಮ ಹಂತದ ವಿಧಿ ವಿಧಾನಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.ಹಿರಿಯ ಮುಖಂಡ ಕೆ. ವೀರಪ್ಪ, ಶ್ರೀಪಾದರಾವ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.