ADVERTISEMENT

ವೀರಶೈವ ಮಠಗಳ ದಾಸೋಹ ಅನನ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 18:05 IST
Last Updated 2 ಮಾರ್ಚ್ 2012, 18:05 IST

ದಾವಣಗೆರೆ:  ರಾಜ್ಯದಲ್ಲಿರುವ ವೀರ ಶೈವ ಮಠಗಳು ಶಿಕ್ಷಣ ಹಾಗೂ ಅನ್ನ ದಾಸೋಹದಲ್ಲಿ ತೊಡಗಿಸಿಕೊಂಡು ಜನರಿಗೆ ಅನುಕೂಲ ಕಲ್ಪಿಸುತ್ತಿರು ವುದನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಶ್ಲಾಘಿಸಿದರು.

ನಗರದ ಎಂಸಿಸಿ `ಬಿ~ ಬ್ಲಾಕ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಸದ್ಯೋ ಜಾತ ಶಿವಾಚಾರ್ಯ ಸ್ವಾಮೀಜಿ ಅವರ ನಾಲ್ಕನೇ ಸಂಸ್ಮರಣೋತ್ಸವದ ಸಂದರ್ಭದಲ್ಲಿ ತಮ್ಮ ಅನುದಾನದಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಬಹಳ ಮಠಾಧೀ ಶರನ್ನು ನೋಡಿದ್ದೇವೆ. ಆದರೆ, ಸದ್ಯೊ ಜಾತ ಶ್ರೀಗಳಂಥ ಸರಳರನ್ನು ನೋಡಿ ರಲಿಲ್ಲ. ಹೃದಯ ವೈಶಾಲತೆ ಯಿಂದ ಸಾಮಾಜಿಕ ಕಾರ್ಯಗಳನ್ನು ಅವರು ಕೈಗೊಂಡಿದ್ದರು ಎಂದು ಸ್ಮರಿಸಿದರು.

ಧಾರವಾಡದ ಮೃತ್ಯುಂಜಯ ಮಠ ಮತ್ತು ಬೆಳಗಾವಿಯ ನಾಗನೂರು ಮಠ ಇಂದಿಗೂ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಅನ್ನದಾಸೋಹ ಮೂಲಕ ಶೈಕ್ಷಣಿಕ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುತ್ತಿವೆ. ಇನ್ನು ಕೆಲವು ಮಠಗಳು ಸಂಸ್ಕೃತ ಮತ್ತು ವೇದಾಭ್ಯಾಸ ನೀಡುವ ಮೂಲಕ ಶಾಲೆಗಳನ್ನು ತೆರದು ಸಾವಿರಾರು ಮಕ್ಕಳಿಗೆ ಆಶ್ರಯ ನೀಡಿವೆ ಎಂದರು.

ಕೊಟ್ಟೂರು ಜಾನುಕೋಟಿ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಠಾಧೀಶ್ವರರು ಸಾಮಾಜಿಕ ಸಂಬಂಧ ಬೆಸೆಯುವಲ್ಲಿ ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿ ಮಠ, ಉದ್ಯಮಿ ಎಸ್.ಎಸ್. ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.