ADVERTISEMENT

ಸಂಸದರ ನಿಧಿ ಕಾಮಗಾರಿಯ ಕತೆ-ವ್ಯಥೆ...

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST
ಸಂಸದರ ನಿಧಿ ಕಾಮಗಾರಿಯ ಕತೆ-ವ್ಯಥೆ...
ಸಂಸದರ ನಿಧಿ ಕಾಮಗಾರಿಯ ಕತೆ-ವ್ಯಥೆ...   

ಹಳೇಬೀಡು: ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಆರಂಭವಾದ ಘಟ್ಟದಹಳ್ಳಿ ರೈತರಕೊಪ್ಪಲಿನ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಈಗ ಜಾನುವಾರು ಕಟ್ಟುವ ಸ್ಥಳವಾಗಿದೆ!ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಕೆ.ಜವರೇಗೌಡ ರಾಜ್ಯಸಭಾ ಸದಸ್ಯರಾಗಿದ್ದಾಗ ಕೇಂದ್ರ ಸರ್ಕಾರದ ಅನುದಾನದಲ್ಲಿ ಹಣ ಮಂಜೂರು  ಮಾಡಿಸಿ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿದ್ದರು. ಮೇಲ್ಛಾವಣಿವರೆಗೂ ಕಾಮಗಾರಿ ಪೂರ್ಣಗೊಂಡಿತು. ಮುಂದಿನ ಕಾಮಗಾರಿ ಕೈಗೊಳ್ಳಲು ಹಣದ ಕೊರತೆ ಉದ್ಭವಿಸಿತು.
 

ಗ್ರಾಮದಲ್ಲಿ ಬಡ ರೈತರ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಹಣ ಹೊಂದಿಸಿ ಸಮುದಾಯ ಭವನ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸರ್ಕಾರದಿಂದಲೂ ಹೆಚ್ಚುವರಿ ಅನುದಾನ ದೊರಕಲಿಲ್ಲ. ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿದರೂ ಸಮುದಾಯ ಭವನ ಊರಿನ ಶುಭ ಕಾರ್ಯಗಳಿಗೆ ಬಳಕೆಯಾಗದೆ ಮೂಲೆಗುಂಪಾಗಿದೆ.
 

‘ಭವನ ಪೂರ್ಣಗೊಳಿಸಲು ಹಣ ಇಲ್ಲ. ಹೀಗಾಗಿ ಸಿಮೆಂಟ್ ಗಿಲಾವ್ ಕಾಣದ ಇಟ್ಟಿಗೆ ಗೋಡೆಗಳು ಗಾಳಿ, ಮಳೆ ಹೊಡೆತಕ್ಕೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದ ಜನತೆ ವಿವಾಹ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಪಟ್ಟಣಗಳಿಗೆ ತೆರಳಬೇಕಾಗಿದೆ. ಹೆಚ್ಚಿನ ಹಣ ನೀಡಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಬೇಕಾಗಿದೆ. ಗ್ರಾಮದಲ್ಲಿ ಸಮುದಾಯ ಭವನ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.‘ಸಮುದಾಯ ಭವನ ಪಾಳು ಬಿದ್ದು ಹಾಳಾಗುವ ಮೊದಲು ಜನಪ್ರತಿನಿಧಿಗಳು ಎಚ್ಚೆತ್ತು ಹಣ ಮಂಜೂರು ಮಾಡಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.