ADVERTISEMENT

ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST
ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ
ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ   

ಶಿವಮೊಗ್ಗ: ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಹಾಗೂ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಶಿ ಹೇಳಿದರು.

ಇಲ್ಲಿನ ವಿನೋಬ ನಗರದ ವಿಪ್ರ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ನಡೆದ `ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ~ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾವುದೇ ವ್ಯಕ್ತಿ ತಾನು ಬೆಳೆದು ಬಂದ ಸಮಾಜಕ್ಕೆ ಮತ್ತು ನಾವು ಪ್ರತಿನಿಧಿಸುವ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬೇಕು. ಆದರೆ, ಇಂದಿನ ಯುವ ಸಮುದಾಯ ಇವೆಲ್ಲವುಗಳಿಂದ ದೂರ ಸರಿದು ವಿದೇಶದತ್ತ ಮುಖ ಮಾಡಿದೆ ಎಂದರು.

ಇಂದಿನ ತಂತ್ರಜ್ಞಾನ ಯುಗದ ಜನರಲ್ಲಿ ವಿದೇಶಿ ವ್ಯಾಮೋಹ, ಸ್ವಾರ್ಥ ಮನೆ ಮಾಡಿದ್ದು, ತಾವು ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬಂತಹ ಕನಸುಗಳನ್ನೇ ಕಾಣುತ್ತಾರೆ.

ಆದರೆ, ತಮ್ಮ ಕನಸಿನ ಗುರಿ ಮುಟ್ಟಿದ ನಂತರ ಸಮಾಜವನ್ನು ಕಡೆಗಣಿಸುವ ಪರಿಪಾಠ ಬೆಳೆಯುತ್ತಿರುವುದು ಮಾತ್ರ ವಿಷಾದನೀಯ ಸಂಗತಿ ಎಂದರು.ವ್ಯಕ್ತಿಯ ಬೆಳವಣಿಗೆಯಲ್ಲಿ ಆತನ ಸಮುದಾಯದ ಕೊಡುಗೆ ಸಹ ಇರುತ್ತದೆ. ಹಾಗಾಗಿ, ಪ್ರತಿಯೊಬ್ಬರು ಸಮುದಾಯಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು ಎಂದು ನುಡಿದರು.

ಇತಿಹಾಸ ಸಂಶೋಧಕ ಕೆಳದಿ ಗುಂಡಾ ಜೋಯಿಸ್, ಪತ್ರಕರ್ತ ಎ.ಆರ್. ರಘುರಾಂ, ಸಮಾಜ ಸೇವಕಿ ಮೂಕಾಂಬಿಕಾ ಅವರನ್ನು ಸನ್ಮಾನಿಸಲಾಯಿತು. ವಿಪ್ರ ಟ್ರಸ್ಟ್ ಉಪಾಧ್ಯಕ್ಷ ಗೋವಿಂದ ಸ್ವಾಮಿ, ಟ್ರಸ್ಟಿಗಳಾದ ಸಚ್ಚಿದಾನಂದ ಮೂರ್ತಿ, ಗೋಪಾಲ್, ನರಸಿಂಹಮೂರ್ತಿ, ಮಾಧವಾಚಾರ್, ನಾರಾಯಣ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.