ADVERTISEMENT

ಸೌಲಭ್ಯಗಳ ಸದ್ಬಳಕೆಯಿಂದ ಶೈಕ್ಷಣಿಕ ಉನ್ನತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ವಿಜಯಪುರ: ಇಂದಿನ ಸ್ಪರ್ಧಾಜಗತ್ತಿನಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳು ನಗರಪ್ರದೇಶದ ಮಕ್ಕಳಿಗೆ ಸ್ಪರ್ಧೆ ನೀಡುವುದು ಕಷ್ಟವಾಗಿದೆ ಎಂದು ಶ್ರೀ ಲಕ್ಷ್ಮಿವೆಂಕಟೇಶ್ವರ ಗಾಣಿಗರ ಸೇವಾಟ್ರಸ್ಟ್‌ನ ಅಧ್ಯಕ್ಷ ಎಲ್.ಗೋವಿಂದರಾಜು ಅಭಿಪ್ರಾಯಪಟ್ಟರು.

ಇಲ್ಲಿನ ಲಕ್ಷ್ಮಿವೆಂಕಟೇಶ್ವರ ಗಾಣಿಗರ ಸೇವಾಟ್ರಸ್ಟ್‌ನ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ~ `ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೀಟು, ಉದ್ಯೋಗ ಪಡೆಯಲು ತೀವ್ರ ಸ್ಪರ್ಧೆ ಎದುರಿಸಬೇಕಿದೆ. ಸರ್ಕಾರ, ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಉನ್ನತಿ ಸಾಧಿಸಬೇಕಾಗಿದೆ ಎಂದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ ಮಕ್ಕಳು ಶಿಸ್ತು, ಶ್ರದ್ಧೆ, ನಿಷ್ಟೆ ಹಾಗೂ ಆಸಕ್ತಿಯಿಂದ ಕಲಿಯಬೇಕು. ಜೊತೆಗೆ ಪೋಷಕರು ಗುರು ಹಿರಿಯರಿಗೆ ಗೌರವ ನೀಡಬೇಕು ಎಂದರು.
ಟ್ರಸ್ಟ್‌ನ ಉಪಾಧ್ಯಕ್ಷ ಎಸ್.ಮರಿಯಪ್ಪ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಕಲಿಕಾಸಾಧನೆ ಕ್ಷೀಣಿಸುತ್ತಿದ್ದು, ಗುರಿಯಿರಿಸಿಕೊಂಡು ಓದಬೇಕು ಎಂದು ತಿಳಿಸಿದರು.

ಸಹ ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯಶೆಟ್ಟಿ ನಿರೂಪಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಲಕ್ಷ್ಮಣ್, ಖಜಾಂಚಿ ವಿ.ಸುರೇಶ್‌ಬಾಬು, ಪದಾಧಿಕಾರಿಗಳು, ಪೋಷಕರು ಪಾಲ್ಗೊಂಡಿದ್ದರು. ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.

ಆತ್ಮಹತ್ಯೆಗೆ ಯತ್ನ
ಚನ್ನಪಟ್ಟಣ: ಅಪರಿಚಿತ ವ್ಯಕ್ತಿಯೊಬ್ಬ ವಿಷಕುಡಿದು ತನ್ನ ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮೊಗಳ್ಳಿ ತಂಗುದಾಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತಿಸಿರುವ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಆತನ ವಯಸ್ಸು 30ರಿಂದ 35ವರ್ಷ. ಭಾನುವಾರ ಮಧ್ಯಾಹ್ನ ತಂಗುದಾಣದಲ್ಲಿ ವಿಶ್ರಮಿಸಿಕೊಳ್ಳಲು ಹೋದವರಿಗೆ, ಈ ವ್ಯಕ್ತಿಯ ಬಾಯಲ್ಲಿ ನೊರೆ ತುಂಬಿಕೊಂಡು ಕೈಯಲ್ಲಿ ರಕ್ತ ಸೋರುತ್ತಿದ್ದದ್ದನ್ನು ಕಂಡಿದ್ದಾರೆ.

ತೀವ್ರ ಅಸ್ವಸ್ಥನಾದ ಈತನನ್ನು ಜನರು ಜನರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬೆಂಗಳೂರಿನ ವಿಕ್ಟೋರಿಯ ಆಸ್ಪತೆಗೆ  ಕಳುಹಿಸಿದ್ದಾರೆಂದು ತಿಳಿದುಬಂದಿದೆ.

 ಆತ್ಮಹತ್ಯೆಗೆ ಯತ್ನಿಸಿದವನ ಜೇಬಿನಲ್ಲಿ ಡೈರಿ ದೊರೆತಿದ್ದು, ಅದರಲ್ಲಿ ಹಲಗೂರು ಭಾಗದ ಕೆಲವರ ಹೆಸರುಗಳಿವೆ. ಹೀಗಾಗಿ ಆತ ಮಳವಳ್ಳಿ ತಾಲ್ಲೂಕಿನವರೆಂದು ಅಂದಾಜಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.