ADVERTISEMENT

ಸ್ಫೋಟ: ಸ್ಥಳದಲ್ಲೇ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಸುರತ್ಕಲ್: ಎಂಎಸ್‌ಇಜೆಡ್ ಪ್ರದೇಶದಲ್ಲಿರುವ ಬಾಳ ~ಎಂಆರ್‌ಪಿಎಲ್ ಮೂರನೇ ಹಂತ~ದ ಕಾಮಗಾರಿ ಸ್ಥಳದಲ್ಲಿ ಕಚ್ಚಾತೈಲ ಸಂಗ್ರಹ ಟ್ಯಾಂಕ್ ದುರಸ್ತಿ ಮಾಡುತ್ತಿದ್ದಾಗ ಮಂಗಳವಾರ ಮಧ್ಯಾಹ್ನ ದಿಢೀರ್ ಸ್ಫೋಟ ಸಂಭವಿಸಿದ್ದು, ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮಧ್ಯಾಹ್ನ 12 ಗಂಟೆಗೆ ತೈಲ ಸಂಗ್ರಹಾಗಾರದ ಟ್ಯಾಂಕ್‌ನ ಜೋಡಣೆಗೆ ವೆಲ್ಡಿಂಗ್ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿತು. ಬಿಹಾರ ಮೂಲದ ಕಾರ್ಮಿಕ ಮುನ್ನಾ ಕುಮಾರ್(24) ಸ್ಥಳದಲ್ಲೇ ಸಾವಿಗೀಡಾದರು. ಮತ್ತೊಬ್ಬ ಕಾರ್ಮಿಕ ಬೀದರ್‌ನ ರಹೀಂಗೆ ಶೇ 70ಕ್ಕೂ ಅಧಿಕ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಪಶ್ಚಿಮ ಬಂಗಾಳದ ಪಪ್ಪು ಮೆಹ್ತೋ, ಬಿಹಾರದ ಉದಯ ಕುಮಾರ್ (26) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ~ಆಫ್ ಷೋರ್~ ಗುತ್ತಿಗೆ ಕಂಪೆನಿಯ ಕಾರ್ಮಿಕರು.

~ಟ್ಯಾಂಕ್ ಒಳಗೆ ಒಂದೆಡೆ ಗ್ರೈಂಡಿಂಗ್ ವರ್ಕ್, ಮತ್ತೊಂದೆಡೆ ಪೇಂಟಿಂಗ್ ಕೆಲಸ ನಡೆಯುತ್ತಿತ್ತು. ಈ ಸಂದರ್ಭ ದಿಢೀರ್ ಸ್ಫೋಟವಾಯಿತು~ ಎಂದು ಗಾಯಾಳು ಪಪ್ಪು ಮೆಹ್ತೋ ಹೇಳಿದರು.  ~ಗ್ರೈಂಡಿಂಗ್ ಯಂತ್ರದ ಸ್ಪಾರ್ಕ್ ಪೇಂಟ್ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.ಎಂಆರ್‌ಪಿಎಲ್‌ಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಸಂಭವಿಸಿದ ಮೂರನೇ ಅವಘಡ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.