ADVERTISEMENT

ಸ್ವಾವಲಂಬಿಗಳಾಗಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಚನ್ನರಾಯಪಟ್ಟಣ: ರೈತರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಬೇಕು ಎಂದು ಭಾರತೀಯ ಸಾವಯವ ಬೇಸಾಯ ಸಂಘಟನೆಯ ಮಾಜಿ ಅಧ್ಯಕ್ಷ ಡಿ.ಡಿ. ಭರಮೇಗೌಡ ಕರೆ ನೀಡಿದರು.

ಕಲ್ಪತರು ಗ್ರಾಮೀಣ ವಿಕಾಸ ಸಂಸ್ಥೆಯ ವತಿಯಿಂದ ಸಂತೇಶಿವರದ ಸಾವಯವ ಕೃಷಿಕ ಬಸವರಾಜು ತೋಟದಲ್ಲಿ ಏರ್ಪಡಿಸಿದ್ದ `ಸಾಂಪ್ರದಾಯಕ ಕೃಷಿ ಮಂಥನ ಕಾರ್ಯಕ್ರಮ~ದಲ್ಲಿ ಅವರು ಮಾತನಾಡಿದರು.

ರೈತರು ದೇಸಿ ತಳಿಯ ಬಿತ್ತನೆ ಬೀಜಗಳನ್ನು ಬಿತ್ತಬೇಕು. ಬೆಳೆಗಳಿಗೆ ತಗಲುವ ರೋಗಗಳ ನಿವಾರಣೆಗೆ ಸಾಂಪ್ರದಾಯಿಕ ಪರಿಹಾರ ಕಂಡುಕೊಳ್ಳಬೇಕು. ಸಾವಯವ ಕೃಷಿಗೆ ಮಹತ್ವ ನೀಡಿ, ಮಣ್ಣನ್ನು ವಿಷಮುಕ್ತಗೊಳಿಸಬೇಕು ಎಂದರು.

ಸಾವಯಕ ಕೃಷಿಕ ಬಿ. ಬಸವರಾಜು ಮಾತನಾಡಿ, 1980ರಿಂದ 5.36 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಕೃಷಿ ಕ್ಷೇತ್ರದಲ್ಲಿ  ತೊಡಗಿಸಿಕೊಂಡರೆ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ತಿಪಟೂರು ಕಲ್ಪತರು ಕಾಲೇಜಿನ ನಿವೃತ್ತ ಪ್ರಾಚಾರ್ಯ ನಂಜುಂಡಪ್ಪ ಮಾತನಾಡಿದರು.  ಭಾರತೀಯ ಸಾವಯವ ಬೇಸಾಯ ಸಂಘಟನೆಯ ಕಾರ್ಯದರ್ಶಿ ಪಿ. ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ. ಪುಟ್ಟರಾಜು, ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ವಿ.ಗಾಯತ್ರಿ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.