ADVERTISEMENT

ಸಾಮೂಹಿಕ ಉತ್ತೀರ್ಣದ ಬದಲು ಬೇರೆ ವಿಧಾನ ಅನುಸರಿಸಿ:ಎಬಿವಿಪಿ ಒತ್ತಾಯ

ಪರೀಕ್ಷಾ ವಿಧಾನದ ಗೊಂದಲ

​ಪ್ರಜಾವಾಣಿ ವಾರ್ತೆ
Published 21 ಮೇ 2020, 22:18 IST
Last Updated 21 ಮೇ 2020, 22:18 IST

ಬೆಂಗಳೂರು: ಲಾಕ್‌ಡೌನ್‌ನಿಂದ ಶಿಕ್ಷಣ ವಲಯದಲ್ಲಿ ಪರೀಕ್ಷೆಗಳ ಕುರಿತು ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಸಾಮೂಹಿಕವಾಗಿ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಸಾಮೂಹಿಕವಾಗಿ ಉತ್ತೀರ್ಣ ಮಾಡುವ ಬದಲು, ಪರ್ಯಾಯ ಪರೀಕ್ಷಾ ವಿಧಾನಗಳನ್ನು ಸರ್ಕಾರ ಅನುಸರಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಹೇಳಿದೆ.

‘ಎಬಿವಿಪಿಯು ದೂರವಾಣಿ ಕರೆ ಮಾಡುವ ಮೂಲಕ 8.68 ಲಕ್ಷ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದೆ. ಸಾಮೂಹಿಕ ಉತ್ತೀರ್ಣದ ಬದಲು, ಕ್ಯಾರಿ ಓವರ್‌ ಪದ್ಧತಿ, ಓಪನ್ ಬುಕ್‌ ಪರೀಕ್ಷೆ, ವರದಿ ಮತ್ತು ಅಸೈನ್‌ಮೆಂಟ್‌ ಪರಿಗಣಿಸಿ, ಸೂಕ್ತ ಅಂಕಗಳನ್ನು ನೀಡಿ ಉತ್ತೀರ್ಣ ಮಾಡಬೇಕು ಎಂಬ ಅಭಿಪ್ರಾಯವನ್ನು ಈ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ’ ಎಂದು ಎಬಿವಿಪಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT