ADVERTISEMENT

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 4:30 IST
Last Updated 4 ಫೆಬ್ರುವರಿ 2012, 4:30 IST

ಬಾಗಲಕೋಟೆ: ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳ ಲಾಗುವುದು. ಈ ಮೂಲಕ ಅಕ್ರಮ ಮರಳು ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 81 ಮರಳು ನಿಕ್ಷೇಪದ  ತಾಣಗಳಿವೆ.  ಅವುಗಳಲ್ಲಿ 63 ಬ್ಲಾಕ್‌ಗಳಿಗೆ ನಿಯಮಾನುಸಾರ ಅನುಮತಿ ನೀಡಲಾಗಿದೆ. ಹರಾಜಿನಲ್ಲಿ ಅನುಮತಿ ಪಡೆದವರಿಗೆ ಮಾತ್ರ ಮರಳು ಸಾಗಾಣಿಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಅನುಮತಿ ನೀಡಿದ ಸ್ಥಳಗಳಿಂದ ಇದುವರೆಗೆ 29,807.72 ಕ್ಯೂಬಿಕ್ ಮೀಟರ್ ಮರಳು ಸಾಗಾಣಿಕೆ ಮಾಡಲು 4843 ಪರವಾನಗಿ ನೀಡಲಾಗಿದೆ. ಇದರಿಂದ 1.26 ಲಕ್ಷ ರೂ.ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜ.29 ರಂದು ಬೀಳಗಿ ತಾಲ್ಲೂಕಿನಲ್ಲಿ  ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ 3 ಬೋಟುಗಳನ್ನು, ಹುನಗುಂದ ತಾಲ್ಲೂಕಿನಲ್ಲಿ  1 ಬೋಟು ಹಾಗೂ ಬಾದಾಮಿ ತಾಲ್ಲೂಕಿನಲ್ಲಿ 10, ಜಮಖಂಡಿ ಹಾಗೂ ಮುಧೋಳ ತಾಲ್ಲೂಕಿನಲ್ಲಿ 15 ಬೋಟ್‌ಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಾಗಲಕೋಟೆ ವಿಭಾಗ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್, ಗಣಿ ಮತ್ತು ಭೂವಿಜ್ಞಾನ ಉಪ ನಿರ್ದೇಶಕರು, ತಹಸೀಲ್ದಾರರು, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.