ADVERTISEMENT

ಉತ್ತಮ ಚಾಲಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:35 IST
Last Updated 12 ಫೆಬ್ರುವರಿ 2011, 8:35 IST

ಬೀಳಗಿ: ‘ಚಾಲಕರು ಒಂದರೆಕ್ಷಣ ಮೈ ಮರೆತರೆ ಪ್ರಯಾಣಿಕರ ಜೀವಕ್ಕೆ ಸಂಚಕಾರ ತಪ್ಪಿದ್ದಲ್ಲ. ತಮ್ಮೆಲ್ಲ ನೋವು ನಲಿವುಗಳನ್ನು ಮರೆತು ತದೇಕಚಿತ್ತರಾಗಿ ಒಂದೂ ಅಪಘಾತ ಮಾಡದೇ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರನ್ನು ಗೌರವಿಸಬೇಕಾದದ್ದು ಸಮಾಜ ಹಾಗೂ ಸರಕಾರದ ಆದ್ಯ ಕರ್ತವ್ಯ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಸ್ಥಳೀಯ ವಾ.ಕ.ರ.ಸಾ.ಸಂಸ್ಥೆಯ ಘಟಕದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲೆಯ 14ಜನ ಚಾಲಕರಿಗೆ ಅಪಘಾತ ರಹಿತ ಚಾಲನಾ ಕರ್ತವ್ಯಕ್ಕಾಗಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಸಮಾಜ ಗುರುತಿಸಿ ಗೌರವಿಸಿದಲ್ಲಿ ಅವರಿಗೆ ಸೇವಾ ಸಂತೃಪ್ತಿ ಸಿಗುವುದಲ್ಲದೇ ಇನ್ನಿತರರಿಗೂ ಅದು ಮಾದರಿಯಾಗಿ ನಿಲ್ಲುತ್ತದೆಂದು ಹೇಳಿದರು.

ಸಮಾರಂಭದಲ್ಲಿ ಮೋಹನ ಜಾಧವ, ಎಂ.ಎಂ. ಶಂಭೋಜಿ, ಶ್ರೀಶೈಲ ಯಂಕಂಚಿ, ಬಿ.ಎಸ್. ಭಾಯಿಸರಕಾರ, ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಎಸ್. ಶಿವಮೂರ್ತಿ, ಸಹಾಯಕ ತಾಂತ್ರಿಕ ಶಿಲ್ಪಿ ಎಲ್.ಜಿ. ರಘುನಾಥ, ಘಟಕ ವ್ಯವಸ್ಥಾಪಕ ಸಲೀಂ ಭಾಯಿ ಸರಕಾರ ಉಪಸ್ಥಿತರಿದ್ದರು.

ಅಪಘಾತ ರಹಿತ ವಾಹನ ಚಾಲನೆಗಾಗಿ ಚಾಲಕರಾದ ಜಿ.ಬಿ.ಅಂಗಡಿ, ಎಂ.ಡಿ.ಯಂಡಿಗೇರಿ, ಎಚ್.ಟಿ. ಲಮಾಣಿ, ಎಚ್.ಡಿ. ಗಾಣಿಗೇರ, ಆರ್.ಎಂ. ಮುಲ್ಲಾ, ಎಸ್.ಎಸ್. ಕರಿಗಾರ, ಎಂ.ಎಂ. ವೈದ್ಯ, ಜಿ.ಜಿ. ಮಾಗಿ, ಜಿ.ಟಿ. ಜೋಗಿನ (ಎಲ್ಲರೂ ಬೀಳಗಿ ಘಟಕದ ಚಾಲಕರು), ಜೆ.ಜಿ.ಸೂಟೆ, ವಿ.ಎಸ್. ಹೊಳಿ, ವಿ.ಎನ್. ಚವ್ಹಾಣ, ಬಿ.ಆರ್. ಪಾಗಾದಿ (ಎಲ್ಲರೂ ಬಾಗಲಕೋಟೆ ಘಟಕದ ಚಾಲಕರು), ವಿ.ಆರ್. ಹೂಲಿ (ಇಲಕಲ್ಲ ಘಟಕದ ಚಾಲಕರು) ಅವರನ್ನು ಬೆಳ್ಳಿಯ ಪದಕ, ನಗದು ಬಹುಮಾನ,  ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.