ಹುನಗುಂದ: ಸ್ಥಳೀಯ ಉದಯ ಯುವಕ ಮಂಡಳ ಹಾಗೂ ಜಿಲ್ಲಾ ಅಮೇಚೂರ್ ಕಬಡ್ಡಿ ಸಂಸ್ಥೆ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ವೀಕ್ಷಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಟೂರ್ನಿಯ ಮೊದಲ ದಿನವಾದ ಶುಕ್ರವಾರದಂತೆ ಶನಿವಾರವೂ ಅಪಾರ ಸಂಖ್ಯೆಯ ಪ್ರೇಕ್ಷಕರು ಗ್ಯಾಲರಿಗಳಲ್ಲಿ ತುಂಬಿದ್ದರು.
ಸಂಜೆ ವೇಳೆಗೆ ಕಚಾಕಚ್ ಭರ್ತಿಯಾಗಿದ್ದ ಗ್ಯಾಲರಿಯಿಂದ ಕೇಳಿ ಬಂದ ಪ್ರೇಕ್ಷಕರ ಕರತಾಡನ ಆಟಗಾರರ ಹುಮ್ಮಸ್ಸು ಹೆಚ್ಚಿಸಿತು. ತಹಶೀಲ್ದಾರ ಅಪರ್ಣಾ ಪಾವಟೆ, ವೈದ್ಯಾಧಿಕಾರಿ ಡಾ.ಕುಸುಮಾ ಮಾಗಿ, ಟಿಸಿಎಚ್ ಅಧೀಕ್ಷಕ ಲಲಿತಾ ಹೊಸಪ್ಯಾಟಿ, ಪ್ರಗತಿಪರ ರೈತ ಹನಮಂತಪ್ಪ ಮುಕ್ಕಣ್ಣವರ, ಸಿಪಿಐ ಯು. ಶರಣಪ್ಪ, ಎಪಿಎಂಸಿ ಅಧ್ಯಕ್ಷ ಅಮರೇಶ ಹುನಕುಂಟಿ ಮುಂತಾದವರು ಪಂದ್ಯಗಳನ್ನು ವೀಕ್ಷಿಸಿ ಮುದಗೊಂಡರು. ರಾಜ್ಯದ ಹಿರಿಯ ಆಟಗಾರರು ಹಾಗೂ ದಾನಿಗಳನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.