ADVERTISEMENT

ಕರಾಟೆ: ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2015, 6:30 IST
Last Updated 16 ಜೂನ್ 2015, 6:30 IST
ಮುಂಬೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಬಾಗಲಕೋಟೆ ನಗರದ ರಾಠೋಡ ಕರಾಟೆ ಸಂಸ್ಥೆಯ ಕರಾಟೆಪಟುಗಳು
ಮುಂಬೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಬಾಗಲಕೋಟೆ ನಗರದ ರಾಠೋಡ ಕರಾಟೆ ಸಂಸ್ಥೆಯ ಕರಾಟೆಪಟುಗಳು   

ಬಾಗಲಕೋಟೆ: ಏಳು ಚಿನ್ನದ ಪದಕ ಸೇರಿದಂತೆ ಒಟ್ಟು 33 ಪದಕಗಳನ್ನು ಬಗಲಿಗೆ ಹಾಕಿಕೊಂಡ ಕರ್ನಾಟಕ ತಂಡ ನಿಹಾನ್ಸಿಕಿ ಕರಾಟೆ ಮತ್ತು ಸ್ಪೋರ್ಟ್ಸ್‌ ಫೆಡರೇಷನ್ ಇತ್ತೀಚೆಗೆ ಮುಂಬೈ ಬೀಚ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಜಿಲ್ಲೆಯ ರಾಠೋಡ ಕರಾಟೆ ಸಂಸ್ಥೆಯ 21 ಕರಾಟೆಪಟುಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ಎಂಟು ರಾಜ್ಯಗಳಿಂದ ಬಂದಿದ್ದ ಕರಾಟೆಪಟುಗಳ ವಿರುದ್ಧ ಕಾದಾಡಿದ ರಾಜ್ಯ ತಂಡದವರು ಏಳು ಚಿನ್ನ, ಒಂಬತ್ತು ಬೆಳ್ಳಿ ಹಾಗೂ 17 ಕಂಚಿನ ಪದಕ ಗೆದ್ದುಕೊಂಡಿದ್ದಾರೆ ಎಂದು ರಾಜ್ಯ ಕರಾಟೆ ಸಂಸ್ಥೆಯ ಪ್ರತಿನಿಧಿ ಎಸ್.ಆರ್.ರಾಠೋಡ ತಿಳಿಸಿದ್ದಾರೆ.

ಪದಕ ಗೆದ್ದ ವಿಜೇತರು: ಶಾಂತೇಶ ಚವ್ಹಾಣ್ (ಚಿನ್ನ ಮತ್ತು ಬೆಳ್ಳಿ), ಪ್ರಜ್ವಲ್ ರಾಠೋಡ (ಚಿನ್ನ ಮತ್ತು ಕಂಚು), ಕಿರಣ್ ನಾಯಕ (ಬೆಳ್ಳಿ ಮತ್ತು ಕಂಚು), ಎಂ.ಐ.ಬೀಳಗಿ (ಕಂಚು), ರಾಜು ರಜ ಪೂತ (ಬೆಳ್ಳಿ ಮತ್ತು ಕಂಚು), ವಿಶ್ವನಾಥ ಕೆಂಚಣ್ಣವರ (ಚಿನ್ನ ಮತ್ತು ಬೆಳ್ಳಿ), ನವೀನ್ ಕೆಂಚಣ್ಣವರ (ಚಿನ್ನ ಮತ್ತು ಬೆಳ್ಳಿ), ಸಾಗ ಚವ್ಹಾಣ್ (ಚಿನ್ನ ಮತ್ತು ಕಂಚು), ಚಂದ್ರಲಾ ಪ್ರಾಪ್ತಿ ಕುಲ ಕರ್ಣಿ(ಚಿನ್ನ), ಅಕ್ಷಯಕುಮಾರ ಹುರ ಕಡ್ಲಿ( ಚಿನ್ನ ಮತ್ತು ಕಂಚು), ಅರ್ಪಿತಾ ಬಡಿಗೇರ (ಬೆಳ್ಳಿ), ಪ್ರಾಣೇಶ ಕುಲಕರ್ಣಿ (ಬೆಳ್ಳಿ), ಶಿವಾನಿ ಬಣಗಾರ (ಕಂಚು), ಮಣಿಕಂಠ ಕೆಂಚಣ್ಣವರ (ಕಂಚು), ಅಶ್ವತ್ಥಕುಮಾರ (ಕಂಚು), ಜಾನಪ್ಪ ದೇವಾನದವರ (ಕಂಚು), ಅಭಯ ಬಣಗಾರ (ಕಂಚು), ರಾಹುಲ್ ಜವಳಿ (ಕಂಚು), ರೋಹಿತ್‌ ಜವಳಿ (ಕಂಚು), ವಿರೇಶ ಕೆಂಚಣ್ಣವರ (ಕಂಚು). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT