ADVERTISEMENT

ಕಲಾವಿದರು ದುಶ್ಚಟಗಳಿಂದ ದೂರವಿರಿ: ಶ್ರೀಗಳು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:45 IST
Last Updated 4 ಡಿಸೆಂಬರ್ 2012, 9:45 IST

ಇಳಕಲ್: `ತಪಸ್ವಿಯ ಮನಸ್ಥಿತಿಯವರಿಗೆ ಮಾತ್ರ ಕಲೆ ಒಲಿಯುವುದು. ಅಪಾರ ಪರಿಶ್ರಮದಿಂದ ಕಲಾವಿದರಾಗಿ ಗುರುತಿಸಿಕೊಂಡ ಅನೇಕರು, ನಂತರ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ದುಶ್ಚಟಗಳಿಂದಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾದವರು ದಾರಿ ತಪ್ಪುತ್ತಿದ್ದಾರೆ. ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸರಾಗಬೇಡಿ. ಕಲೆಯೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ' ಎಂದು ಶಿರೂರಿನ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು. 

ಅವರು ನಗರದ ಅನುಭವ ಮಂಟಪದಲ್ಲಿ ನಟರಾಜ ಡಾನ್ಸ್ ಅಕಾಡೆಮಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಿಎಸ್‌ಆರ್ ಕಾಂಗ್ರೆಸ್‌ನ ಮುಖಂಡರಾದ ಜಯಶ್ರಿ ಸಾಲಿಮಠ, ನಿರ್ಣಾಯಕರಾದ ಧಾರವಾಡದ ಪ್ರಕಾಶ ಮಲ್ಲಿಗವಾಡ ಮಾತನಾಡಿದರು.

ಸಮಾರಂಭವನ್ನು ರಾಜು ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಂಗಭೂಮಿಯ ಹಿರಿಯ ಕಲಾವಿದರಾದ ಜಗದೀಶ ಕೊಪ್ಪರದ, ಗಂಗವ್ವ ಆರೇರ ಹಾಗೂ ದುರಗಪ್ಪ ಕೆಸರಭಾವಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಗನಗೌಡ ಗೌಡರ, ಪ್ರಮೋದ ಹಂಚಾಟೆ, ಮುತ್ತು ನಾಲವಾಡದ, ವಿಠ್ಠಲ ಜಕ್ಕಾ, ಮಂಜುನಾಥ ಬುಟ್ಟಾ, ಸಂಗಪ್ಪ ರುಮಾಲದ, ಅಬ್ದುಲ್‌ರಜಾಕ್ ಹಳ್ಳಿ, ಸುರೇಶ ಬಡಿಗೇರ ಉಪಸ್ಥಿತರಿದ್ದರು.

ಮೆಹಬೂಬ್ ಕಂದಗಲ್ಲ ಪ್ರಾರ್ಥನಾ ಗೀತೆ ಹಾಡಿದರು. ಮಾರ್ಕಂಡೇಯ ವಗ್ಗಾ ಸ್ವಾಗತಿಸಿದರು. ಬಸವರಾಜ ರೊಡ್ಡಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.