ADVERTISEMENT

`ಕಾಂಗ್ರೆಸ್‌ನಿಂದ ಅಲ್ಪ ಸಂಖ್ಯಾತರ ಅಭಿವೃದ್ಧಿ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:47 IST
Last Updated 23 ಏಪ್ರಿಲ್ 2013, 8:47 IST

ಬಾಗಲಕೋಟೆ: `ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಲ್ಪ ಸಂಖ್ಯಾತರ ಅಭಿವೃದ್ಧಿ ಸಾಧ್ಯ' ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರ.

ನಗರದ ಎಪಿಎಂಸಿ ತರಕಾರಿ ಹರಾಜು ಮಾರುಕಟ್ಟೆ ಪ್ರಾಂಗಣದಲ್ಲಿ ಸೋಮವಾರ ಬಾಗವಾನ ಜಮಾತ ಮತ್ತು ಕಿರುಕುಳ ವ್ಯಾಪಾರಸ್ಥರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ  ಅಲ್ಪ ಸಂಖ್ಯಾತ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

`ಕಳೆದ ಐದು ವರ್ಷದಲ್ಲಿ ಜನರನ್ನು ಮೋಸಗೊಳಿಸಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ' ಮನವಿ ಮಾಡಿದರು. ಮುಖಂಡರಾದ  ಗೂಡುಸಾಬ್ ಬಾಗವಾನ, ಅಬ್ದುಲ್‌ಸಾಬ್ ಬಾಗವಾನ, ವಲೀಸಾಬ್ ಬಾಗವಾನ, ಅಬ್ದುಲಸಾಬ್ ಬಾಳಿಕಾಯಿ, ಮಹೀಬೂಬಸಾಬ್ ಬಾಗವಾನ, ಗೈಬುಸಾಬ್ ಬಾಗವಾನ, ಮಹೀಬೂಬಸಾಬ್ ಸೌದಾಗರ, ರಸೂಲಸಾಬ್ ಸೌದಾಗರ, ಸಿಖಂದರ ಗೊಳಸಂಗಿ, ಅಬ್ದುಲ್ ಬಾಗವಾನ, ವಲೀಸಾಬ್ ಚೌದ್ರಿ, ಮಲ್ಲಿಕಸಾಬ್‌ಪಾರ್ಶಿ, ಅಲ್ಲಿಸಾಬ ದೊಡಮನಿ, ಅಬ್ದುಲ್‌ಸಾಬ ಹೊನವಾಡ, ಮಹಿಬೂಬ್ ಪೇಂಟರ, ಹುಸೇನಸಾಬ ಚೌದ್ರಿ, ಕಾಶೀಂಸಾಬ್ ಮಕ್ತೆದಾರ, ಅಮಿನಸಾಬ ಹಳ್ಳಿ, ರಾಜಮಹ್ಮದ ಕೆರೂರ, ಮುನ್ನಾ ಕೋಲ್ಹಾರ, ರಶೀದ ತಾಳಿಕೋಟಿ ಸೇರಿದಂತೆ ಅನೇಕ ಪ್ರಮುಖರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಹುಲ್ಲಪ್ಪ ಮೇಟಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಎಸ್. ಜಿ.ನಂಜಯ್ಯನಮಠ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎನ್.ಪಾಟೀಲ, ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಬಿ.ಸೌದಾಗರ, ನಗರ ಅಧ್ಯಕ್ಷ ಎ.ಡಿ.ಮೊಕಾಶಿ, ಮುಖಂಡರಾದ ಶಂಭುಲಿಂಗಪ್ಪ ಅಕ್ಕಿಮರಡಿ, ಅಜೀಜ ಬಾಳಿಕಾಯಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.