ADVERTISEMENT

‘ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗಬಾರದು’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 5:25 IST
Last Updated 30 ಮಾರ್ಚ್ 2018, 5:25 IST

ಮುಧೋಳ: ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೆ ಉತ್ಸಾಹ ಕಡಿಮೆ ಮಾಡಿಕೊಳ್ಳಬಾರದು. ಪಕ್ಷ ಸೇರ್ಪಡೆಯಾದವರನ್ನು ಗೌರವದಿಂದ ಕಂಡು ಅವರನ್ನು ಸಂಘಟನೆಯಲ್ಲಿ ಅವರ ಶಕ್ತಿ ಮತ್ತು ಯುಕ್ತಿ ಬಳಸಿ ಕೊಳ್ಳಬೇಕು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

ಅವರು ನಗರದ ವಾರ್ಡ್ 14ರ ಮಹಿಳೆಯರು ಹಾಗೂ ಯುವಕರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಾತನಾಡಿ, ಮುಧೋಳ ಕ್ಷೇತ್ರ ದಾದ್ಯಂತ ಎರಡು ಸುತ್ತಿನ ಪ್ರವಾಸ ಮಾಡಿದ್ದೇನೆ ಎಲ್ಲಡೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಹಾಗೂ ಮೋದಿ ಅಭಿಮಾನಿಗಳನ್ನು ಪಕ್ಷದ ಕಾರ್ಯಕರ್ತರನ್ನಾಗಿಸಬೇಕು. ಪ್ರತಿ ಮತದಾರರನ್ನು ಭೇಟಿಯಾಗಿ ಪ್ರಧಾನಿ ಮೋದಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ವಿವರಿಸಬೇಕು ಎಂದು ಹೇಳಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಮುಖಂಡರಾದ ಉದಯ ಸಾರವಾಡ,ಸಂತೋಷ ಶಿಂಧೆ, ವೆಂಕಟೇಶ ಕುಮಕಾಲೆ, ರಾಜು ಕಂಬಾರ, ಸಾಗರ ಸಾಲಮಂಟಪಿ, ವಿನೋದ ಚವ್ಹಾಣ, ಪ್ರವೀಣ ತೋಗಾಡಿ, ಸಂಜು ಅಂಗಡಿ, ಮೀನಾಕ್ಷಿ ತಡಕರ, ಸುಮಂಗಲಾ ಸರಕಾರ, ಶಕುಂತಲಾ ಸಾಲಮಂಟಪಿ, ರುದ್ರಪ್ಪ ಅಡವಿ, ಸುನಿಲ ನಿಂಬಾಳಕರ, ನಾಗಪ್ಪ. ಅಂಬಿ, ಬಂಡುರಾವ ಘಾಟಗೆ, ನಗರ ಯುವಮೊರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ, ಮಂಜು ಘೋರ್ಪಡೆ, ಶ್ಯಾಮ  ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.