ADVERTISEMENT

ಕೃಷ್ಣೆ, ಮಲಪ್ರಭೆ ಬತ್ತಿದರೂ ಲಾಭ...!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 10:10 IST
Last Updated 15 ಮಾರ್ಚ್ 2012, 10:10 IST

ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯಲ್ಲಿ  ನೀರಿದ್ದರೂ ಲಾಭ, ಬನತ್ತಿದರೂ ಕೆಲವರಿಗೆ ಲಾಭ. ಕೂಡಲಸಂಗಮದ ಸಂಗಮೇಶ್ವರ ದೇವಾಲಯದಲ್ಲಿ ಸಮ್ಮಿಲನವಾದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕಳೆದ ಎರಡು ವಾರದಿಂದ ಸಂಪೂರ್ಣ ಬರಿದಾಗಿವೆ ಆದರೆ ಇಲ್ಲಿಯ ಕೆಲವು ಮಕ್ಕಳಿಗೆ ನದಿ ಬತ್ತಿರುವುದರಿಂದ ನದಿಯಲ್ಲಿ ಭಕ್ತರು ಎಸೆದ ನಾಣ್ಯಗಳನ್ನು ಹುಡುಕುವ ಕಾಯಕವನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ರೂಢಿಸಿಕೊಂಡಿದ್ದಾರೆ.

ಕೂಡಲಸಂಗಮದಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ನದಿ ಸಮ್ಮೀಲನವಾಗಿರುವುದು, ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಹಾಗೂ ಕ್ಷೇತ್ರಾಧಿಪತಿ ಸಂಗಮನಾಥ ಇರುವುದರಿಂದ ವರ್ಷವಿಡಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು, ಪ್ರವಾಸಿಗರು ನದಿಯಲ್ಲಿ ನಾಣ್ಯಗಳನ್ನು, ವಸ್ತುಗಳನ್ನು ಎಸೆಯುವರು. ಈ ಎಲ್ಲ ನಾಣ್ಯಗಳು, ವಸ್ತುಗಳು ನದಿಯ ತಳಭಾಗದಲ್ಲಿ ಉಳಿಯುವವು. ಅವುಗಳನ್ನು ಹುಡುಕುವುದು ಮಕ್ಕಳ ಕೆಲಸವಾಗಿದೆ.

ನದಿಯ ಎಲ್ಲ ಭಾಗದಲ್ಲಿ ನಾಣ್ಯಗಳು ಬಿದ್ದಿರುತ್ತವೆ ಆದರೆ ಬಸವೇಶ್ವರರ ಐಕ್ಯ ಮಂಟಪದ ಬಳಿ ಅಧಿಕ ಪ್ರಮಾಣದಲ್ಲಿ ಬಿದ್ದಿರುತ್ತವೆ. ನಿತ್ಯ 600 ರಿಂದ 1000 ರೂ ವರೆಗೆ ನಾಣ್ಯಗಳು ಸಿಗುತ್ತವೆ ಈ ನಾಣ್ಯಗಳನ್ನು ಸ್ವಚ್ಛಗೊಳಿಸಿ ಬಳಸುತ್ತೇವೆ ಎಂದು ಕೃಷ್ಣ ಎಂಬ ಬಾಲಕ ಹೇಳಿದನು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.