ಮುಧೋಳ: ತಾಲ್ಲೂಕಿನ ಒಂಟಗೋಡಿ, ಚನ್ನಾಳ, ಮಂಟೂರ, ಕಿಶೋರಿ, ಹಲಗಲಿ, ಲೋಕಾಪುರ ಮುಂತಾದ ಭಾಗಗಳಲ್ಲಿ ಕಬ್ಬು, ಗೋವಿನ ಜೋಳ, ಬಾಳೆ ಮುಂತಾದ ಬೆಳೆಗಳಿಗೆ ಮಾರಕವಾದ ಗೊಣ್ಣೆ ಹುಳುವಿನ ತಾಯಿ ಕೀಟಗಳ ಭಾದೆ ಉಂಟಾಗಿದ್ದು ಕೃಷಿ ಇಲಾಖೆಯ ಸಲಹೆಗಳನ್ನು ಪಡೆದು ರೈತರು ಸಾಮೂಹಿಕವಾಗಿ ನಿಯಂತ್ರಣಕ್ಕೆ ಸಜ್ಜಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ವಿ. ಅಂಬಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಈ ಕೀಟಗಳು ಬೇರುಗಳನ್ನು ಕಡಿಯುವುದರಿಂದ ಶೇ. 30 ರಿಂದ ಶೇ 60ರಷ್ಟು ಬೆಳೆಗಳಿಗೆ ಹಾನಿ ಮಾಡ ಬಹುದಾಗಿದೆ. ಈ ಕುರಿತು ಇಲಾಖೆ ಜನಜಾಗೃತಿಯಲ್ಲಿ ನಿರತವಾಗಿದೆ. ಈ ಕೀಟ ನಿಯಂತ್ರಿಸಲು ಮುಧೋಳ, ಲೋಕಾಪುರ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಸಂಪರ್ಕಿಸಬೇಕು ಎಂದು ಅಂಬಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.